ಅಲೆವೂರು: ಕ್ರೇನ್ ಢಿಕ್ಕಿ- ಪಾದಚಾರಿ ಸಾವು
ಮಣಿಪಾಲ, ಮೇ 22: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಕ್ರೇನ್ ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಮಣಿಪಾಲದಲ್ಲಿ ಶನಿವಾರ ನಡೆದಿದೆ.
ನಾತು ಶೇರಿಗಾರ್ (85) ಮೃತ ದುರ್ದೈವಿ. ನಾತು ಅವರು ಕರ್ವಾಲು-ಅಲೆವೂರು ರಸ್ತೆ ಮೂಡುಅಲೆವೂರು ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕ್ರೇನ್ ಢಿಕ್ಕಿ ಹೊಡೆದಿದೆ. ಪರಿಣಾಮ ಅವರ ತಲೆಯ ಬಲಭಾಗ, ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರೀಕ್ಷಿ ಆದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.