ಉಡುಪಿ: ಮೂರನೇ ತರಗತಿ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು
ಉಡುಪಿ: ಶನಿವಾರ ಸಂಜೆ ಮನೆಯಿಂದ ಆಟವಾಡಲು ಹೋಗಿದ್ದ ಮೂರನೇ ತರಗತಿಯ ವಿದ್ಯಾರ್ಥಿಯೋರ್ವ ಭಜನಾ ಮಂದಿರದ ಕೆರೆಗೆ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ.
ಕಡೆಕಾರ್ ನಿವಾಸಿ ಗಿರೀಶ್ ಭಟ್ ಎಂಬವರ ಮಗ ರಾಘವೇಂದ್ರ ಮೃತ ಬಾಲಕ. ನಿನ್ನೆ ಮನೆ ಬಳಿ ಆಟವಾಡಲು ಜಾರುಬಂಡಿಗೆ ಹೋಗಿದ್ದ ಬಾಲಕ ಕೈಕಾಲು ತೊಳೆಯಲು ಕೆರೆಗೆ ಇಳಿದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದು, ಈಜಾಡಲು ಬರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಇಡಿ ಹುಡುಕಾಟ ನಡೆಸಿದರು ಬಾಲಕ ಪತ್ತೆಯಾಗದ ಕಾರಣ ಇಂದು ಬೆಳಿಗ್ಗೆ ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನೀರಿನಾಳದಲ್ಲಿ ಬಾಲಕನ ಮೃತ ದೇಹ ಪತ್ತೆ ಹಚ್ಚಿ ಮೇಲೆತ್ತಿದ್ದಾರೆ.