ಅಲೆವೂರು: ಉಪಚುನಾವಣೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರ್ ಪಾಲನ್’ಗೆ ಭರ್ಜರಿ ಜಯಭೇರಿ
ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ನ ಸದಸ್ಯ ಕೊರಂಗ್ರಪಾಡಿ ಪ್ರವೀಣ್ ಶೆಟ್ಟಿ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರ್ ಪಾಲನ್ 67 ಮತಗಳಿಂದ ವಿಜಯಿಯಾಗಿದ್ದಾರೆ.
ಶುಕ್ರವಾರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಈ ಹಿಂದಿನ ಅಭ್ಯರ್ಥಿಯಾದ ದಿ.ಪ್ರವೀಣ್ ಶೆಟ್ಟಿಯವರು ಸಹೋದರ ಪ್ರಸಾದ್ ಶೆಟ್ಟಿ ಮತ್ತು ಕಳೆದ ಬಾರಿ ಕೇವಲ ಐದು ಮತದ ಅಂತರದಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಶಂಕರ್ ಪಾಲನ್ ಸ್ಪರ್ಧಿಸಿದ್ದರು.
ಇಂದು ಉಡುಪಿಯ ತಾಲೂಕು ಕಛೇರಿಯಲ್ಲಿ ನಡೆದ ಮತ ಏಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಸಾದ್ ಶೆಟ್ಟಿ 333 ಮತ ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಂಕರ್ ಪಾಲನ್ 400 ಮತ ಪಡೆದು ಮೊದಲ ಬಾರಿ ವಿಜಯದ ನಗೆ ಬೀರಿದ್ದಾರೆ.