ಬೈಂದೂರು: ಮೀನುಗಾರನ ಮೃತದೇಹ ಪತ್ತೆ
ಬೈಂದೂರು ಮೇ 21: ಪಡುವರಿ ಗ್ರಾಮದ ಸುಮನಾವತಿ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರ ಸುಂದರ (42) ಅವರ ಮೃತದೇಹ ಇಂದು ಪಡುವರಿ ಗ್ರಾಮದ ದೇವಸ್ಥಾನದ ಬಳಿ ತೀರದಲ್ಲಿ ಪತ್ತೆಯಾಗಿದೆ.
ಸುಂದರ ಅವರು ಮೇ 20 ರಂದು ಸಂಜೆ ವೇಳೆ ಪಡುವರಿ ಗ್ರಾಮದ ಸುಮನಾವತಿ ಹೊಳೆಯಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಇವರ ಮೃತದೇಹವು ಇಂದು (ಮೇ21) ಪಡುವರಿ ಗ್ರಾಮದ ಸೇನೇಶ್ವರ ದೇವಸ್ಥಾನದ ಬಳಿ ಅರಬ್ಬಿ ಸಮುದ್ರದ ತೀರದಲ್ಲಿ ಬಂಡೆಕಲ್ಲು ಗಳ ಮದ್ಯದಲ್ಲಿ ಸಿಕ್ಕಿ ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮೃತರ ತಮ್ಮ ನೀಡಿದ ಮಾಹಿತಿಯಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ