ಮಂಗಳೂರು: ಅಚ್ಚರಿ ಮೂಡಿಸಿದ ಗೋಡಂಬಿಯಾಕಾರದ ಕೋಳಿ ಮೊಟ್ಟೆ
ಮಂಗಳೂರು ಮೇ.21: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಸಮೀಪ ಲಾಯಿಲಾ ಎಂಬಲ್ಲಿ ಕೋಳಿಯೊಂದು ಗೋಡಂಬಿಯಾಕಾರದಲ್ಲಿ ಮೊಟ್ಟೆ ಇಡುತ್ತಿರುವ ವಿಚಿತ್ರ ಘಟನೆ ನಡೆದಿದೆ.
ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬುವವರ ಮನೆಯಲ್ಲಿ ಸಾಕಿದ್ದ ಕೋಳಿ ಕೆಲವು ದಿನಗಳಿಂದ ಗೋಡಂಬಿಯಾಕಾರದಲ್ಲಿ ಮೊಟ್ಟೆ ಇಡುತ್ತಿದ್ದು, ಈವೆರಗೂ ಹತ್ತು ಮೊಟ್ಟೆಯನ್ನು ಇಟ್ಟಿದೆ.
ಇದೀಗ ಗೋಡಂಬಿಯಾಕಾರದ ಕೋಳಿ ಮೊಟ್ಟೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು, ಈ ಕೋಳಿ ಮೊಟ್ಟೆಯನ್ನು ನೋಡಲು ಜನರು ಪ್ರಶಾಂತ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.