ಪಠ್ಯಪುಸ್ತಕದಲ್ಲಿ ನಾರಾಯಣಗುರುಗಳ ಸಂದೇಶ ಬಿಟ್ಟಿರುವುದು ಸಮಂಜಸವಲ್ಲ- ಯೋಗೀಶ್ ಶೆಟ್ಟಿ
ಉಡುಪಿ: ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳು ಪ್ರಪಂಚಕ್ಕೆ ಒಂದೇ ಜಾತಿ,ಒಂದೇ ಮತ, ಒಂದೇ ದೇವರು ಎಂಬ ಸರ್ವಕಾಲಿಕ ಸಂದೇಶದ ಮೂಲಕ ಯೋಗ್ಯವಾದ ಸಂದೇಶಗಳನ್ನು ಸಮಾಜಕ್ಕೆ ನೀಡಿದ ಮಹಾನ್ ವ್ಯಕ್ತಿ. ರಾಜ್ಯ ಸರಕಾರ ಅವರ ಹೆಸರನ್ನು ಪಠ್ಯಪುಸ್ತಕದಲ್ಲಿ ಬಿಟ್ಟಿರುವುದು ಸಮಂಜಸವಲ್ಲ. ಅಂತೆಯೇ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್, ಮಹಾನ್ ತತ್ವಜ್ಞಾನಿ ಬಸವಣ್ಣ ಮತ್ತು ಸಮಾಜ ಸುಧಾರಕ ರಾಮಸ್ವಾಮಿ ಪೆರಿಯಾರ್ ಅವರ ಜೀವನಾದರ್ಶ, ತತ್ವಾದರ್ಶ ಮತ್ತು ವಿಚಾರಧಾರೆಗಳ ಬಗ್ಗೆ ಇದ್ದ ಪಾಠವನ್ನು ರಾಜ್ಯಸರಕಾರ ಪಠ್ಯಪುಸ್ತಕದಿಂದ ಬಿಟ್ಟಿರುವುದನ್ನೂ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಖಂಡಿಸಿದ್ದಾರೆ. ಈ ಬಗ್ಗೆ ಸರಕಾರ ಪರಿಶೀಲನೆ ನಡೆಸಿ ನಾರಾಯಣಗುರುಗಳ ಪಠ್ಯವನ್ನು ಮರುಸೇರ್ಪಡೆಗೊಳಿಸ ಬೇಕೆಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.