ಆಗ ಭಾಷಣ ಮಾಡಿದ ಕಾರ್ಕಳದ ಬಿಲ್ಲವ ನಾಯಕರು ಈಗ ಮಾತನಾಡಲಿ- ದೀಪಕ್‌ ಕೋಟ್ಯಾನ್‌

ಉಡುಪಿ: ದೀಪ ಆರುವ ಮುಂಚೆ ಜೋರಾಗಿ ಉರಿಯುವ ರೀತಿ ಬಿಜೆಪಿ ಪರಿಸ್ಥಿತಿಯಾಗಿದೆ. ನಾರಾಯಣ ಗುರುಗಳ ಪಠ್ಯ ವನ್ನು ಕೈ ಬಿಟ್ಟಿರುವುದು ಬಿಜೆಪಿಯದ್ದು ವಿನಾಶಕಾಲೆ ವಿಪರೀತ ಬುದ್ದಿ ಎಂದು ತೋರಿಸುತ್ತದೆ ಎಂದು  ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್‌ ಕೋಟ್ಯಾನ್‌ ಅವರು ಹೇಳಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಅವರು, ದೇಶದಲ್ಲಿ ತೀವ್ರವಾದ ಅಸ್ಪೃಶ್ಯ, ಶೋಷಣೆ ಇದ್ದ ಸಮಯದಲ್ಲಿ ಪೆರಿಯರ್ ಹಾಗೂ ನಾರಾಯಣ ಗುರುಗಳಂತವರು ಕ್ರಾಂತಿ ಮಾಡಿದ್ದರು. ಆ ಸಮಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ಮಾಡುವುದು ಕಷ್ಟದ ಕೆಲಸ ವಾಗಿತ್ತು. ಶೋಷಣೆ ಗೆ ಒಳಗಾಗಿದ್ದ ಬಿಲ್ಲವ ಸಮಾಜವನ್ನು ಮುಖ್ಯವಾಗಿ ಸಿಕೊಂಡು ಅಸ್ಪೃಶ್ಯತೆಯಿಂದ ನೊಂದಿದ್ದ ಇತರ ಸಮುದಾಯಕ್ಕೂ ದಾರಿ ದೀಪವಾದವರು. ಆದ್ದರಿಂದ ಅವರ ಬಗೆಗಿನ ಪಠ್ಯ ಪುಸ್ತಕ ಕೈ ಬಿಡುವುದು ಬಿಜೆಪಿ ಡೋಂಗಿ ಎಂದು ತೋರಿಸುತ್ತದೆ ಎಂದರು.

ಅಂದು ನಾರಾಯಣ ಗುರುಗಳ ಟ್ಯಾಬ್ಲೋ ಧಿಕ್ಕರಿಸಿದವರು ಇಂದು ಪಠ್ಯ ಕೈಬಿಟ್ಟಿದ್ದಾರೆ ಎಂದ ಅವರು, ಬಿಲ್ಲವರ ಬಗ್ಗೆ ಬರೇ ಭಾಷಣ ಮಾಡಿದ ಕೆಲವು ಕಾರ್ಕಳದ ಬಿಲ್ಲವ ನಾಯಕರು ಹಾಗೂ ಬಿಜೆಪಿಯ ಬಿಲ್ಲವ ಮುಖಂಡರು ಈಗ ಮಾತನಾಡಲಿ ಎಂದು ಸವಾಲು ಹಾಕಿದರು. ಶಿವಮೊಗ್ಗದ ವಿಮಾನ ನಿಲ್ದಾಣ ಕ್ಕೆ ಯಡಿಯೂರಪ್ಪ ಹೆಸರು ಸೂಚಿಸುವ ಇವರ ಮಂತ್ರಿ ಮಂಡಲದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳು ಮತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡಲು ಕೇಳಲು ಮಾತು ಬರುವುದಿಲ್ಲವೇ ಎಂದು ಕೇಳಬೆಕಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಹಿಂದುಳಿದ ವರ್ಗದವರನ್ನು ಮುಗಿಸುವ ಹಾಗೂ ಮೇಲ್ವರ್ಗದ ವರನ್ನು ಜೀವಂತ ಇಡುವ  ಉದ್ದೇಶದಿಂದ ಅವರು ಈ ರೀತಿಯಲ್ಲಿ ಬಿಜೆಪಿ ವರ್ತಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!