ಹೆಬ್ರಿ: ಎರಡುವರೆ ವರ್ಷದ ಮಗುವನ್ನು ಆಡಿಸುತ್ತಿದ್ದಾಗ ಕೆಳಗೆ ಬಿದ್ದು ಗಾಯ
ಹೆಬ್ರಿ ಮೇ.19 (ಉಡುಪಿ ಟೈಮ್ಸ್ ವರದಿ): ಎರಡುವರೆ ವರ್ಷದ ಮಗುವನ್ನು ಎತ್ತಿ ಆಡಿಸುತ್ತಿದ್ದ ವೇಳೆ ಮಗು ಕೈಜಾರಿ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಶಿವಪುರ ಗ್ರಾಮದ ಮುಳ್ಳುಗುಡ್ಡೆಯ ಜನತಾ ಕಾಲೋನಿಯಲ್ಲಿ ನಡೆದಿದೆ.
ಜನತಾ ಕಾಲೋನಿಯ ಶಕುಂತಳಾ ಎಂಬವರ ಎರಡುವರೆ ವರ್ಷದ ಸಾಕ್ಷಿ ಗಾಯಗೊಂಡ ಮಗು. ಮೇ.17 ರಂದು ಮನೆಯ ಬದಿಯಲ್ಲಿರುವ ಗುಡ್ಡದ ದೈವದ ತಂಬಿಲ ಇದ್ದ ಕಾರಣ ಅಲ್ಲಿಗೆ ಬಂದಿದ್ದ ಶಕುಂತಳಾ ಅವರ ಸಂಬಂಧಿ ರಾಜು, ಶಕುಂತಳಾ ಅವರ ಮನೆಯಲ್ಲಿ ರಾತ್ರಿ ಸಾಕ್ಷಿಯನ್ನು ಎತ್ತಿ ಆಡಿಸುತ್ತಿದ್ದರು. ಈ ವೇಳೆ ಮಗು ಆತನ ಕೈಯಿಂದ ಕಳಗೆ ಜಾರಿ ನೆಲದ ಮೇಲೆ ಬಿದ್ದ ಪರಿಣಾಮ ಮಗುವಿನ ಎಡಕಿವಿಯ ಬಳಿ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಘಟನೆಯು ರಾಜುರವರ ನಿರ್ಲಕ್ಷತನದಿಂದ ಅಗಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.