ಕಾಪು: ವಿದೇಶದಿಂದ ಕೆಲಸ ತೊರೆದು ಬಂದ ವ್ಯಕ್ತಿ ನೇಣಿಗೆ ಶರಣು
ಕಾಪು ಮೇ.19 (ಉಡುಪಿ ಟೈಮ್ಸ್ ವರದಿ): ಖಿನ್ನತೆಗೆ ಒಳಗಾಗಿದ್ದ ಮೂಡಬೆಟ್ಟು ಗ್ರಾಮದ ಮಾರ್ಕ್ ಮಾರ್ಟಿಸ್ ರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾರ್ಕ್ ಮಾರ್ಟಿಸ್ (63) ರವರು 2 ವರ್ಷದಿಂದ ವಿದೇಶದಿಂದ ಕೆಲಸ ಬಿಟ್ಟು ಮನೆಯಲ್ಲಿದ್ದು, ಟೆನ್ಷನ್ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿದ್ದರು. ಇದೆ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಗೊಂಡು ಇಂದು ಬೆಳಿಗ್ಗೆ ಮನೆಯ ಬಾವಿಯಲ್ಲಿ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತ್ನಿ ಅನೀತ್ ಮಾರ್ಟಿಸ್ ಎಂಬವರು ನೀಡಿದ ಮಾಹಿತಿಯಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ ಸಹಾಯವಾಣಿ ನಂಬರ್: 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್-4, ಬೆಂಗಳೂರು.