ನಾರಾಯಣ ಗುರುಗಳ ವಿಚಾರಧಾರೆ ಪಠ್ಯದಿಂದ ತೆಗೆದು ಅವಮಾನ- ಕೃಷ್ಣಮೂರ್ತಿ ಆಚಾರ್ಯ
ಉಡುಪಿ ಮೇ.19 (ಉಡುಪಿ ಟೈಮ್ಸ್ ವರದಿ): ಜನರಲ್ಲಿ ಒಡಕನ್ನು ಮೂಡಿಸಿ ಜನರ ಮನಸ್ಸನ್ನು ಬೇರೆಡೆಗೆ ಕೊಂಡೊಯ್ದು ಮನಸ್ಸೊಳಗೆ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ನಾರಾಯಣ ಗುರುಗಳು ಗ್ರಾಮದಿಂದ ಹಿಡಿದು ದೇಶಕ್ಕೆ, ಪ್ರಪಂಚಕ್ಕೆ ಒಂದೇ ಜಾತಿ ಒಂದೇ ಕುಲ ಎಂಬ ಸಮಾನತೆಯ ಸಂದೇಶ ಸಾರಿದವರು. ಅಂತಹ ವ್ಯಕ್ತಿಯ ವಿಚಾರಧಾರೆಯನ್ನು ಪಠ್ಯದಿಂದ ತೆಗೆದು ಹಾಕುವ ಮೂಲಕ ಅವರಿಗೆ ಮಾಡಿರುವ ಅವಮಾನ ಖಂಡನೀಯ. ಈ ಹಿಂದೆಯೂ ಕಳೆದ ಗಣರಾಜ್ಯೋತ್ಸವದ ಪರೇಡ್ ನಲ್ಲಿಯೂ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ನಿರಾಕರಿಸಲಾಗಿತ್ತು. ಈ ಘಟನೆಯನ್ನು ಜನರು ಇನ್ನೂ ಮರೆತಿಲ್ಲ. ಇವೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.