ಭಾರತದ ಸ್ಥಿತಿಯೂ ಶ್ರೀಲಂಕಾದಂತೆಯೇ ಭಾಸವಾಗುತ್ತಿದೆ: ರಾಹುಲ್ ಗಾಂಧಿ
ಬೆಂಗಳೂರು: ದೇಶದಲ್ಲಿ ತೈಲ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ನೋಡಿದರೆ ಭಾರತದ ಸ್ಥಿತಿಯೂ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಂತೆಯೇ ಭಾಸವಾಗುತ್ತಿದೆ ಎಂದು ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತ, ಶ್ರೀಲಂಕಾ ಆರ್ಥಿಸ್ಥಿತಿಗತಿಗಳನ್ನು ತೋರಿಸುವ ಅಂಕಿಅಂಶದ ಗ್ರಾಫ್‌ನೊಂದಿಗೆ ಜನರನ್ನು ವಿಚಲಿತಗೊಳಿಸುವುದರಿಂದ ಸತ್ಯಗಳು ಬದಲಾಗುವುದಿಲ್ಲ. ಭಾರತವು ಶ್ರೀಲಂಕಾದಂತೆಯೇ ಭಾಸವಾಗುತ್ತಿದೆ ಎಂದಿದ್ದಾರೆ.
ಶ್ರೀಲಂಕಾ ಹಾಗೂ ಭಾರತದ ಪರಿಸ್ಥಿತಿಯನ್ನು ತುಲನೆ ಮಾಡುವ ರೇಖಾ ನಕ್ಷೆಯನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಇದರಲ್ಲಿ ತೈಲ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ತುಲನಾತ್ಮಕ ಮಾಹಿತಿ ಇದೆ.
ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಆಹಾರ ಉತ್ಪಾದನೆಯೂ ಸಮರ್ಪಕವಾಗಿ ಆಗದ ಕಾರಣ ಅದರ ಭದ್ರತೆಯೂ ಕುಸಿದಿದೆ. ಇದರಿಂದ ಅಲ್ಲಿನ ಪ್ರಜೆಗಳು ಸರ್ಕಾರದ ವಿರುದ್ಧ ಬಂಡೆದಿದ್ದಾರೆ. ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಕರ್ಫ್ಯೂ ಹೇರುವ ಮೂಲಕ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ