ಮತಾಂತರ ನಿಷೇಧ ಕಾಯ್ದೆ ಜಾರಿ ಬೆನ್ನಲ್ಲೇ ಮೊದಲ ಕೇಸು ದಾಖಲು
ಕೊಡಗು: ರಾಜ್ಯದಲ್ಲಿ ನಿನ್ನೆಷ್ಟೇ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದರ ಬೆನ್ನಲ್ಲೇ ಮತಾಂತರ ಆರೋಪದಲ್ಲಿ ದಂಪತಿಗಳ ಮೇಲೆ ಕೇಸ್ ದಾಖಲಾಗಿದೆ.
ಮಡಿಕೇರಿಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಪಣಿ ಎರವರ ಮುತ್ತ ಎಂಬುವರನ್ನು ಕೇರಳ ಮೂಲದ ಕುರಿಯಚ್ಚನ್-ಸಲಿನಾಮ ಎನ್ನುವಂತವಹ ಕ್ರೈಸ್ತ ದಂಪತಿಗಳು ಮತಾಂತರಕ್ಕೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ.