ಸ್ಯಾಕ್ಸೊಫೋನ್ ಕಲಾವಿದೆ ನೇಣಿಗೆ ಶರಣು
ಮಂಗಳೂರು ಮೇ.18: ದ.ಕ ಜಿಲ್ಲೆಯ ಸ್ಯಾಕ್ಸೊಫೋನ್ ಕಲಾವಿದೆಯೊಬ್ಬರು ತಾವು ವಾಸವಿದ್ದ ಫ್ಲಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಹೊರವಲಯದ ಶಕ್ತಿನಗರದ ಫ್ಲಾಟ್ ನಲ್ಲಿ ವಾಸ್ತವ್ಯವಿದ್ದ ಸ್ಯಾಕ್ಸೊಫೋನ್ ಕಲಾವಿದೆ ಸುಜಾತಾ ದೇವಾಡಿಗ (31) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಮೂಲ್ಕಿ ಎಸ್ ವಿಟಿ ಬಳಿಯ ನಿವಾಸಿಯಾದ ಸುಜಾತ ಮುಲ್ಕಿಯಲ್ಲಿ ಓದು ಮುಗಿಸಿ ಉತ್ತಮ ಸ್ಯಾಕ್ರೋಫೋನ್ ಕಲಾವಿದೆಯಾಗಿದ್ದರು. ನಿನ್ನೆ ಮಧ್ಯಾಹ್ನ ಅವರು ತಮ್ಮ ಕಾರ್ಯಕ್ರಮ ಮುಗಿಸಿ ಬಂದು ಮನೆಯವರೊಡನೆ ತಲೆನೋವು ಎಂದು ಹೇಳಿ ತಮ್ಮ ಕೋಣೆಗೆ ಹೋದವರು, ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 8.30 ಯಾದರೂ ಸುಜಾತ ಅವರು ಕೋಣೆಯಿಂದ ಹೊರಗೆ ಬಾರದ್ದನ್ನು ಕಂಡು ಅವರ ಪತಿ ನಿತಿನ್ ಕಿಟಕಿಯಿಂದ ನೋಡಿದಾಗ ಸುಜಾತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿದ್ದಾರೆ.