ಕೋರ್ಟ್ ಆದೇಶ ಉಲ್ಲಂಘಿಸಿ ದ.ಕ ಜಿಲ್ಲೆಯ ಹಲವು ಶಾಲೆಗಳಲ್ಲಿ ಗಣಹೋಮ ಹಾಗೂ ಶಾರದಾಪೂಜೆ

ಮಂಗಳೂರು ಮೇ.18: ಹೈಕೋರ್ಟ್ ಆದೇಶದ ಹೊರತಾಗಿಯೂ ದ.ಕ ಜಿಲ್ಲೆಯ ಹಲವು ಶಾಲೆಗಳಲ್ಲಿ ಗಣಹೋಮ ಹಾಗೂ ಶಾರದಾಪೂಜೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಗುರುತುಗಳನ್ನು, ಆಚರಣೆಗಳನ್ನು ಮಾಡಬಾರದು ಎಂಬ ಹೈಕೋರ್ಟ್ ಇತ್ತೀಚಿನ ಆದೇಶವಿದ್ದರೂ ಶೈಕ್ಷಣಿಕ ವರ್ಷದ ಮೊದಲ ದಿನವೇ ಹೈಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ವಿಟ್ಲ ಕೇಪು ಸಮೀಪದ ಪಡಿಬಾಗಿಲು, ಸುಳ್ಯ ಹರಿಹರಪಳ್ಳತ್ತಡ್ಕ ಸೇರಿ ಕರಾವಳಿಯ ಕೆಲವು ಶಾಲೆಗಳಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿ ಪೂಜೆ ಮಾಡಲಾಗಿದೆ.

ಈ ಮೊದಲು ಶಾಲೆಗಳಲ್ಲಿ ಶಾರದಾ ಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಸಾಮರಸ್ಯದಿಂದ ನಡೆಯುತ್ತಿತ್ತು. ಇತ್ತೀಚೆಗೆ ಹಿಜಾಬ್ ವಿವಾದದಿಂದಾಗಿ ಹೈಕೋರ್ಟ್ ಖಡಕ್ ಸೂಚನೆ ನೀಡಿ ಶಾಲೆಗಳಲ್ಲಿ ಧಾರ್ಮಿಕ ಗುರುತು, ಆಚರಣೆ ಮಾಡದಂತೆ ಆದೇಶ ನೀಡಿತ್ತು. ಆದರೆ ಇದೀಗ ಕೆಲವು ಶಾಲೆಗಳು ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿ ಶಾಲೆಗಳಲ್ಲಿ ಶಾರದಾ ಪೂಜೆ ಗಣ ಹೋಮಗಳನ್ನು ನಡೆದಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!