ಸಶಸ್ತ್ರ ಮೀಸಲು ಪಡೆಯ ಎಎಸೈಗೆ ಸೋಂಕು, ಉಡುಪಿ ಎಸ್ಪಿ ಕಚೇರಿ ಸ್ಯಾನಿಟೈಜ್
ಉಡುಪಿ: ಇಲ್ಲಿನ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಒಂದು ವಾರಗಳ ಕಾಲ ಕೆಲಸ ನಿರ್ವಹಿಸಿದ್ದ ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯ ಎಎಸೈಯವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಕಾರಣದಿಂದ ಎಸ್ ಪಿ ಕಚೇರಿಯನ್ನುಎರಡು ದಿನಗಳ ಹಿಂದೆ ಸ್ಯಾನಿಟೈಜ್ ಮಾಡಲಾಗಿದೆ.
ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯ ಎಎಸೈಯವರಿಗೆ ಸೋಂಕು ದೃಢವಾಗಿದೆ. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಕಚೇರಿಯಲ್ಲಿ ಒಂದು ವಾರ ಕೆಲಸ ನಿರ್ವಹಿಸಿದ್ದರು. ಅಲ್ಲಿ ಹಲವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಡಿಎಆರ್ ಸಿಬಂದಿಗೆ ಕೊರೋನಾ ಪಾಸಿಟಿವ್ ವದಂತಿ ಹಿನ್ನಲೆಯ್ಲಲ್ಲಿ ಎಸ್ಪಿ ಕಚೇರಿಯನ್ನು ಮುಚ್ಚಲಾಗಿದೆ ಎಂಬ ವರದಿಗಳು ಬಂದಿದ್ದು, ಅಂತಹ ಯಾವುದೇ ರೀತಿಯ ಕಚೇರಿ ಮುಚ್ಚುವ ಕಾರ್ಯಗಳು ನಡೆದಿಲ್ಲ. ಎಸ್ಪಿ ಕಚೇರಿಗೆ ಪ್ರತಿನಿತ್ಯ ಹಲವಾರು ಮಂದಿ ಬರುವುದರಿಂದ ಕಚೇರಿಯನ್ನು ಶನಿವಾರ ಸ್ಯಾನಿಟೈಸ್ ಮಾಡಲಾಗಿದೆ. ಈಗಾಗಲೇ ಹರಡಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು ಎಸ್ಪಿ ಕಚೇರಿ ಮೊದಲಿನಂತೆಯೇ ಕರ್ತವ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಡಿಎ ಆರ್ ಪೊಲೀಸ್ ಸಿಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿರುವ ವರದಿಗಾಗಿ ಇನ್ನೂ ಕೂಡ ಕಾಯಲಾಗುತ್ತಿದ್ದು ಪಾಸಿಟಿವ್ ವರದಿ ಬಂದರೂ ಕಚೇರಿ ಸೀಲ್ ಡೌನ್ ಮಾಡಲಾಗುವುದಿಲ್ಲ ಎಂದು ಎಸ್ಪಿ ವಿಷ್ಣುವರ್ಧನ್ ಸ್ಪಷ್ಪ ಪಡಿಸಿದ್ದಾರೆ.
Good luck. God bless you and your team.