ಶೈಕ್ಷಣಿಕ ವರ್ಷದ ಪಿಯು ಕಾಲೇಜು ಸಮವಸ್ತ್ರ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಹಿಜಾಬ್‌ ಪ್ರಕರಣ ರಾಷ್ಟ್ರದಾದ್ಯಂತ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ಬಾರಿ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ಧರಿಸಬೇಕು. ಒಂದು ವೇಳೆ ನಿಗದಿಪಡಿಸಿಲ್ಲವಾದರೆ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡುವ ಸಮವಸ್ತ್ರ ಧರಿಸುವಂತೆ ಮಾರ್ಗಸೂಚಿ ಪ್ರಕಟಿಸಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷದ ದಾಖಲಾತಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮೇ 20ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಜೂ.1ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪ್ರವೇಶ ಪಡೆಯಲು ಜೂ.15 ಕೊನೆಯ ದಿನವಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳು ಜೂ. 9 ರಿಂದ ಆರಂಭವಾಗಲಿದೆ. ಅ.1 ರಿಂದ 12ರ ವರೆಗೆ ಮಧ್ಯಾಂತರ ರಜೆ ಇರಲಿದೆ. 2023 ಮಾ. 31 ಕೊನೆಯ ಕಾರ್ಯನಿರತ ದಿನವಾಗಿದೆ. ಎ.1ರಿಂದ ಬೇಸಗೆ ರಜೆ ಆರಂಭವಾಗಲಿದೆ.

ದಂಡ ಶುಲ್ಕವಿಲ್ಲದೆ ದಾಖಲಾತಿ ಪಡೆಯಲು ಜೂ.15 ಕೊನೆಯ ದಿನವಾಗಿದೆ. ವಿವಿಧ ಮಂಡಳಿಗಳಿಂದ ಪಾಸ್‌ ಆಗಿರುವ ಬಗ್ಗೆ ತಾತ್ಕಾಲಿಕ ಆರ್ಹತಾ ಪತ್ರದ ಆಧಾರದ ಮೇಲೆ ಪ್ರವೇಶ ನೀಡಬಾರದು. ಈ ರೀತಿ ನಡೆದುಕೊಂಡರೇ ಪ್ರಾಂಶುಪಾಲರನ್ನೇ ನೇರ ಹೊಣೆಗಾರರಾಗಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ಇಲಾಖೆ ನೀಡಿದೆ. 

Leave a Reply

Your email address will not be published. Required fields are marked *

error: Content is protected !!