ಅಂಬಾಗಿಲು: ಅವಾಚ್ಯ‌ ಶಬ್ದಗಳಿಂದ ಬೈದು ಹಲ್ಲೆ- ಪತ್ನಿಯಿಂದ ದೂರು

ಉಡುಪಿ ಮೇ.17(ಉಡುಪಿ ಟೈಮ್ಸ್ ವರದಿ): ಅವಾಚ್ಯ‌ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಉಡುಪಿಯ ಅಂಬಾಗಿಲುವಿನ ಪೂರ್ಣಿಮಾ ಎಂಬವರು ತಮ್ಮ ಗಂಡ ಹಾಗೂ ಆತನ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪೂರ್ಣಿಮಾ ಅವರು ವೆಂಕಟರಾಜ್ ಎಂಬಾತನೊಂದಿಗೆ 14 ವರ್ಷದ ಹಿಂದೆ ಮದುವೆ ಆಗಿದ್ದು  ಮಗನಿರುತ್ತಾನೆ.  2-3 ವರ್ಷದಿಂದ ಇವರಿಬ್ಬರಿಗೂ ವೈಮನಸ್ಸು ಇದ್ದು ಗಂಡನ ಹಿಂಸೆಯಿಂದ ಬೇಸತ್ತು ಸುಮಾರು 3 ತಿಂಗಳಿಂದ ತನ್ನ ಮಗನೊಂದಿಗೆ ತವರು ಮನೆಗೆ ಬಂದು ವಾಸ ಮಾಡಿಕೊಂಡಿದ್ದರು.
ನಿನ್ನೆ ಬೆಳಿಗ್ಗೆ ಪೂರ್ಣಿಮಾ ಅವರು ಬಟ್ಟೆ ತರಲು ತಾಂಗದಗಡಿಯಲ್ಲಿರುವ ತಮ್ಮ‌ ಗಂಡನ ಮನೆಗೆ ಹೋಗಿದ್ದ ವೇಳೆ ಅವರ ಗಂಡ ವೆಂಕಟ ರಾಜ್ ಹಾಗೂ ನಾಗರಾಜ ಮತ್ತು ಗೋಪಿ ಎಂಬವರು ಬಂದು ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ್ದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!