ಕಾರ್ಕಳ: ಪ್ಲಾಟ್, ಅಂಗಡಿಕೋಣೆ ನೀಡದೆ ನೀಡದೆ ದಂಪತಿಗೆ ರೂ1.30 ಕೋಟಿ ವಂಚನೆ
ಕಾರ್ಕಳ ಮೇ.17(ಉಡುಪಿ ಟೈಮ್ಸ್ ವರದಿ): ಅಪಾರ್ಟ್ಮೆಂಟ್ ಮಾರಾಟ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ಪಡೆದು ವಂಚಿಸಿರುವ ಕುರಿತು ಕಾರ್ಕಳ ಕಸಬಾದಲ್ಲಿರುವ ಸಮೃದ್ಧಿ ಹಿಲ್ಸ್ ಎಂಬ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಪ್ರವರ್ತಕರ ವಿರುದ್ಧ ಉಷಾ ಜಯಂತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳದ ಕುಕ್ಕುಂದೂರು ಗ್ರಾಮದ ಉಷಾ ಜಯಂತ್ ಅವರಿಗೆ ಕಾರ್ಕಳ ಕಸಬಾದಲ್ಲಿರುವ ಸಮೃದ್ಧಿಹಿಲ್ಸ್ ಎಂಬ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಪ್ರವರ್ತಕರಾದ ಸುರೇಶ್ ಸುಂದರ ಶೆಟ್ಟಿ, ಭಾಸ್ಕರ ಬೈರಿ ಶೆಟ್ಟಿ, ಬಾಲು ಬಂದುಭಿಸೆ, ಸತೀಶ್ ಸುಂದರ್ ಶೆಟ್ಟಿ, ರಮೇಶ್ ಕುಮಾರ್ ಗೋಮಾಲ್ ಎಂಬವರು ಸಮೃದ್ಧಿ ಹಿಲ್ಸ್ ನ ಅಪಾರ್ಟ್ಮೆಂಟ್ ನಂಬ್ರ 505, 603, 705, 805 ನ್ನು ಖರೀದಿಸುವಂತೆ ವಿನಂತಿಸಿಕೊಂಡಿದ್ದಾರೆ. ಇವರ ಮಾತನ್ನು ನಂಬಿದ ಉಷಾ ಜಯಂತ್ ಅವರು ಕಟ್ಟಡದ ದಾಖಲೆಗಳು ಸರಿಯಾಗಿದೆ ಎಂದು ನಂಬಿ 72,00,000 ರೂ.ಗೆ ಅಪಾರ್ಟ್ಮೆಂಟ್ ಖರೀದಿಸಲು ನಿರ್ಧರಿಸಿ ಕ್ರಯ ಕರಾರು ಮಾಡಿಕೊಂಡು ಸಂಪೂರ್ಣ ಮೊತ್ತವನ್ನು ಪಾವತಿಸಿದ್ದರು.
ಹಾಗೂ 2012 ರ ಜ. 20 ರಂದು ಉಷಾ ಅವರ ಗಂಡ ಜಯಂತ್ ರವರು ಫ್ಲಾಟ್ ನಂಬ್ರ 102, 203, 307 ನ್ನು ಖರೀದಿಸಲು ಕ್ರಯ ಕರಾರು ಮಾಡಿಕೊಂಡಿರುತ್ತಾರೆ ಹಾಗೂ ಕಾರ್ಕಳ ಕಸಬಾದ ಸ.ನಂ 123/1ಎ2, ಸ.ನಂ 123/1ಬಿ2, ಸ.ನಂ123/11ಬಿ ಸ್ಥಳ ಹಾಗೂ ಸಮೃದ್ಧಿ ಹಿಲ್ಸ್ ನ ಅಂಗಡಿ ಕೋಣೆ ಸಂಖ್ಯೆ 1, 2 ನ್ನು ಖರೀದಿ ಮಾಡಲು ಹಂತ ಹಂತವಾಗಿ ರೂ. 58,00,000 ನ್ನು ಪಾವತಿಸಿರುತ್ತಾರೆ. ಆರೋಪಿಗಳು 2016 ರ ಎಪ್ರಿಲ್ ಒಳಗೆ ನಿರ್ಮಾಣ ಕಾರ್ಯ ಪೂರ್ತಿಗೊಳಿಸುವುದಾಗಿ ನಂಬಿಸಿ ಕಾಮಗಾರಿ ಪೂರ್ತಿಗೊಳಿಸದೇ ಉಷಾ ಮತ್ತು ಅವರ ಗಂಡನಿಗೆ ವಂಚನೆಯನ್ನು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.