ಕುಂದಾಪುರ: ವೃದ್ಧೆಯ ಚಿನ್ನದ ಸರ ಸುಲಿಗೆ ಪ್ರಕರಣ- ಆರೋಪಿಯ ಬಂಧನ
ಕುಂದಾಪುರ ಮೇ.17: ತಾಲೂಕಿನ ಕಾಳಾವರ ಗ್ರಾಮದ ನಡುಬೆಟ್ಟು ಎಂಬಲ್ಲಿ ಅಪರಿಚಿತನೋರ್ವ ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಿಲಕ್ ಕುಮಾರ್ ಪ್ರಕರಣದ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು ಕದ್ದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಂದಾಪುರದ ಕಾಳಾವರ ಗ್ರಾಮದ ನಡುಬೆಟ್ಟು ಎಂಬಲ್ಲಿ ಬೈಕಿನಲ್ಲಿ ಬಂದ ಆರೋಪಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪದ್ದಮ್ಮ ಶೆಟ್ಟಿ ಎಂಬವರ ಬಳಿ ವಿಳಾಸ ಕೇಳುವ ನೆಪದಲ್ಲಿ ಅವರ ಕುತ್ತಿಗೆಯಲ್ಲಿ ಇದ್ದ 2 ಪವನ್ ತೂಕದ ಚಿನ್ನದ ಚೈನ್ ಕದ್ದು ಪರಾರಿಯಾಗಿದ್ದ. ಪ್ರಕರಣವನ್ನು ದಾಖಲಿಸಿಕೊಂಡ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.