ಉಡುಪಿ: ಇ-ಸ್ಯಾಂಡ್ ಆ್ಯಪ್ ಮೂಲಕ ಮರಳು ಲಭ್ಯ

ಉಡುಪಿ, ಮೇ 17: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಝಡ್ ಮತ್ತು ನಾನ್ ಸಿ.ಆರ್.ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ ಮರಳು ತೆರವುಗೊಳಿಸುವ ಕಾರ್ಯ ಕೈಗೊಂಡಿರುವ ಹಿನ್ನೆಲೆ, ಉಡುಪಿ ಇ-ಸ್ಯಾಂಡ್ ಆ್ಯಪ್ ಮೂಲಕ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಪೂರೈಸಲಾಗುತ್ತಿದೆ.

ಪ್ರಸ್ತುತ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆ, ತಾತ್ಕಾಲಿಕ ಮರಳು ಪರವಾನಿಗೆದಾರರು, ಮರಳು ಗುತ್ತಿಗೆದಾರರು, ವಾಹನ ಮಾಲೀಕರು ಹಾಗೂ ಚಾಲಕರು ರೇನ್ ಟಿ4ಯು ಜಿ.ಪಿ.ಎಸ್ ಸಂಸ್ಥೆಯಿOದ ಯುಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಪಡೆದು, ಇ.ಎಮ್ ವಿಷನ್ ಆ್ಯಪ್ ಮೂಲಕ ಮರಳು ಸಾಗಾಣಿಕೆ ವಾಹನಗಳ ಚಲನವಲನಗಳನ್ನು ಹಾಗೂ ಸಾರ್ವಜನಿಕರು, ಕಂದಾಯ, ಪೊಲೀಸ್, ಆರ್.ಟಿ.ಓ ಹಾಗೂ ಇತರೆ ಇಲಾಖೆಗಳು ಸ್ಯಾಂಡಿ ಉಡುಪಿ ಆ್ಯಪ್ ಮೂಲಕ ವಾಹನಗಳ ಚಾಲಕರು ಮರಳು ಸಾಗಾಣಿಕೆ ಮಾಡುವ ಕುರಿತು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿ ಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: 0820-2950088, 2572333 ಹಾಗೂ ಆಪ್‌ನ ಮಾಹಿತಿಗಾಗಿ ಅಂಬಾಗಿಲು ರಸ್ತೆ, ಪೆರಂಪಳ್ಳಿ, ಉಡುಪಿ, ಮೊಬೈಲ್ ಸಂಖ್ಯೆ: 8310738476, 9611712361, 8050121886 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!