ಕಟಪಾಡಿ: ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ
ಕಾಪು ಮೇ.17: ದೇವಸ್ಥಾನಕ್ಕೆಂದು ಹೋದ ರಿಯಲ್ ಎಸ್ಟೇಟ್ ಉದ್ಯಮಿ, ಕಟಪಾಡಿ ನಿವಾಸಿ ಪ್ರಕಾಶ್ ರಾವ್ ಎಂಬವರು ನಾಪತ್ತೆಯಾಗಿದ್ದಾರೆ.
ವಿವಾಹಿತರಾಗಿರುವ ಪ್ರಕಾಶ್(46) ಅವರಿಗೆ ಇಬ್ಬರು ಮಕ್ಕಳಿದ್ದು, ಅವರು, ಮೇ 9 ರಂದು ಕಟಪಾಡಿಯ ತನ್ನ ಮನೆಯಿಂದ ಹೊರಟು ಬಾರ್ಕೂರು ಗರಿಕೆ ಮಠ ದೇವಸ್ಥಾನಕ್ಕೆಂದು ಹೋಗಿದ್ದರು. ಆದರೆ ಬಳಿಕ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಉರುಟು ಮುಖ, ಕಪ್ಪು ಮೈಬಣ್ಣ, ಸಾಮಾನ್ಯ ಮೈಕಟ್ಟು ಹೊಂದಿರುವ ಅವರು, ನೀಲಿ ಬಣ್ಣದ ಟೀ ಶರ್ಟ್, ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಹಾಗೂ ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ 0820-2551033 ದೂರವಾಣಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.