ಪ್ರೈಮ್ ಉಡುಪಿ- ನೀಟ್, ಸಿಇಟಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಆರಂಭ
ಉಡುಪಿ ಮೇ.17(ಉಡುಪಿ ಟೈಮ್ಸ್ ವರದಿ): ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಸಿಇಟಿ ಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಪ್ರೈಮ್ ಸಿಇಟಿ ಸೆಂಟರ್ ಉಡುಪಿ ಸಂಸ್ಥೆಯಲ್ಲಿ ವೆಕೇಶನ್ ತರಬೇತಿ ಗಳು ಈಗಾಗಲೇ ಆರಂಭಗೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಳು ಶೀಘ್ರವಾಗಿ ಆರಂಭಗೊಳ್ಳಲಿದೆ.
ಪ್ರೈಮ್ ಸಂಸ್ಥೆಯು ಕಳೆದ 13 ವರ್ಷಗಳಿಂದ ಸಿಇಟಿ, ನೀಟ್ ವಿದ್ಯಾರ್ಥಿ ಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಾ ಬರುತ್ತಿದ್ದು, ಇಲ್ಲಿ ಪ್ರತೀ ದಿನ ಬೆಳಗ್ಗೆ 8.30 ರಿಂದ ಸಂಜೆ 4 ರವರೆಗೆ ಫಿಸಿಕ್ಸ್ (ಭೌತಶಾಸ್ತ್ರ), ಕೆಮಿಸ್ಟ್ರಿ(ರಾಸಾಯನ ಶಾಸ್ತ್ರ),ಮ್ಯಾಥ್ಸ್(ಗಣಿತ) ಹಾಗೂ ಬಯೋಲಾಜಿ(ಜೀವ ಶಾಸ್ತ್ರ)ವಿಷಯದ ವೆಕೇಶನ್ ತರಗತಿಗಳು ಆರಂಭಗೊಂಡಿದ್ದು, ಸಿಇಟಿ, ನೀಟ್, ಜೆಇಇ ಹಾಗೂ ಮಣಿಪಾಲ ವಿವಿ ಪರೀಕ್ಷೆಗಳಿಗೆ ವೀಕೆಂಡ್ ತರಬೇತಿಗಳು ಜೂನ್ 2ನೇ ವಾರದಲ್ಲಿ ನಡೆಯಲಿದೆ.
ಈ ಸಂಸ್ಥೆಯಿಂದ ಕಳೆದ ವರ್ಷ ತರಬೇತಿ ಪಡೆದ ಪಿಯುಸಿ ವಿದ್ಯಾರ್ಥಿಗಳಾದ ಸುಪ್ರೀತಾ ನಾಯಕ್ ಹಾಗೂ ಆದಿತ್ಯ ರಾವ್ 600 ಕ್ಕೆ 600 ಅಂಕ ಪಡೆದುಕೊಂಡಿರುತ್ತಾರೆ.
ಸಿಇಟಿ, ನೀಟ್, ಜೆಇಇ ಹಾಗೂ ಮಣಿಪಾಲ ವಿವಿ ಪರೀಕ್ಷೆ ತರಗತಿಗಳು ಶೀಘ್ರವಾಗಿ ಆರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳು, ಪ್ರೈಮ್ ಸಿಇಟಿ ಸೆಂಟರ್, ಆಚಾರ್ಯ ಇ.ಎನ್.ಟಿ ಕಾಂಪ್ಲೆಕ್ಸ್ 2ನೇ ಮಹಡಿ, ಎಂಜಿಎಂ ಕಾಲೇಜು ಹತ್ತಿರ, ಕುಂಜಿಬೆಟ್ಟು ಉಡುಪಿ ಈ ಕಚೇರಿಯನ್ನು ಸಂಪರ್ಕಿಸಬಹುದು.