ಶಂಕರನಾರಾಯಣ: ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ
ಶಂಕರನಾರಾಯಣ ಮೇ.16 (ಉಡುಪಿ ಟೈಮ್ಸ್ ವರದಿ): ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ಗುಮ್ಮೊಲ ಎಂಬಲ್ಲಿ ಜಗದೀಶ ತೆರದಳ್ಳಿ (36) ಎಂಬವರು ನಿನ್ನೆ ಮಧ್ಯಾಹ್ನದ ವೇಳೆ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನಲ್ಲಿ ಅಡಿಗೆ ಮತ್ತು ಕಂಟ್ರಾಕ್ಟ್ ಕೆಲಸ ಮಾಡಿದ್ದ ಕರುಣಾಕರ ಶೆಟ್ಟಿ (49) ಎಂಬವರು ಆರ್ಥಿಕ ನಷ್ಟದಿಂದ ಮನನೊಂದು ಮದ್ಯ ಸೇವನೆ ಅಭ್ಯಾಸ ಮಾಡಿಕೊಂಡಿದ್ದರು. ಬಳಿಕ ಊರಿಗೆ ಬಂದಿದ್ದ ಅವರು ಇಲ್ಲಿಯೂ ಮದ್ಯಸೇವನೆಗೆ ಆರ್ಥಿಕ ಅಡಚಣೆಯುಂಟಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಕುಂದಾಪುರ ತಾಲೂಕು ಕುಳ್ಳುಂಜೆ ಗ್ರಾಮದ ಕಲ್ಲು ಬಚ್ಚಲು ಮನೆ ಎಂಬಲ್ಲಿನ ನಿನ್ನೆ ಸಂಜೆ ಹಾಡಿಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎರಡೂ ಘಟನೆಗೆ ಸಂಬಂಧಿಸಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ ಸಹಾಯವಾಣಿ ನಂಬರ್: 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.