ಕಾಪು: ಸಮಾಜ ಸೇವಕ ಫಾರೂಕ್, ಸಾಯಿನಾಥ್ ಶೇಟ್, ಪ್ರಭಾಕರ ಆಚಾರ್ಯರಿಗೆ ಸನ್ಮಾನ
ಕಾಪು: ವಿಶ್ವಭಾರತಿ ಕಾಪು ವತಿಯಿಂದ ಸ್ವದೇಶಿ ಮೇಳದ ಸಭಾಂಗಣ ವೇದಿಕೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಸಾಯಿನಾಥ್ ಶೇಟ್ ಕುಂದಾಪುರ ಹಾಗೂ ಕಲಾವಿದ ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ಇವರಿಗೆ ಸನ್ಮಾನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಶಾಸಕರು ಲಾಲಾಜಿ ಆರ್ ಮೆಂಡನ್ ಮಾತನಾಡಿ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸುವುದು ಅವರಿಗೆ ಇನ್ನಷ್ಟು ಸಮಾಜ ಮುಖಿ ಕೆಲಸ ಮಾಡಲು ಉತ್ತೇಜನ ನೀಡಿದಂತೆ ಎಂದು ಹೇಳಿದರುಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುರ್ಮೆ ಸುರೇಶ್ ಶೆಟ್ಟಿ ಫಾರೂಕ್ ಚಂದ್ರನಗರ, ಸಾಯಿನಾಥ್ ಶೇಟ್ ಹಾಗೂ ಪ್ರಭಾಕರ ಆಚಾರ್ಯರ ಸಮಾಜ ಮುಖಿ ಕೆಲಸ ಎಲ್ಲರು ಮೆಚ್ಚುವಂತದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷತೆ ಯನ್ನು ವಿಶ್ವಭಾರತಿ ಅಧ್ಯಕ್ಷರಾದ ಕಾಪು ಶ್ರೀಕಾಂತ್ ಬಿ ಆಚಾರ್ಯ ವಹಿಸಿದ್ದರು ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು ಶಿವಮೊಗ್ಗ, ಸಂತೋಶ್ ಬಡಿಗೇರ್, ಸುರೇಶ್ ಆಚಾರ್ಯ, ಮದು ಆಚಾರ್ಯ ಮೂಲ್ಕಿ, ಸುಮನಾ ಮಂಗಳೂರು, ಗಂಗಾಧರ ಆಚಾರ್ಯ,ರೋಷನ್ ಬೆಲ್ಮನ್, ಚಂದ್ರಶೇಖರ್ ಮಂಡೆಕೋಲು, ಪ್ರಬೋದ್ ಚಂದ್ರ,ಕಾಪು ಪುರಸಭೆ ಮಾಜಿ ಅಧ್ಯಕ್ಷರಾದ ಅನಿಲ್ ಕುಮಾರ್, ಕಿಶೋರ್ ಆಚಾರ್ಯ, ಸುಧಾಕರ್ ಆಚಾರ್ಯ ಬಿಳಿಯಾರು, ಸುನಿಲ್ ಶೇಟ್ ಕುಂದಾಪುರ, ದಾಮೋದರ ಶರ್ಮ, ಶಶಿಧರ ಪುರೋಹಿತ ಕಟಪಾಡಿ, ಸುಧಾಕರ ಸಾಲ್ಯಾನ್ ಕಾಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು.