ಬ್ರಹ್ಮಾವರ: ರೈಲು ಡಿಕ್ಕಿ, ಚಾಂತಾರು ನಿವಾಸಿ ಮೃತ್ಯು
ಬ್ರಹ್ಮಾವರ ಮೇ. 16 (ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರದ ಚಾಂತಾರು ರೈಲು ಹಳಿ ಬಳಿ ರೈಲು ಡಿಕ್ಕಿ ಹೊಡೆದು ಹೇರೂರು ಗ್ರಾಮದ ಸೋಮ ನಾಯ್ಕ ಎಂಬವರು ಮೃತಪಟ್ಟಿದ್ದಾರೆ.
ಸೋಮ ನಾಯ್ಕ (55) ಅವರು ಮೇ.15 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಬಳಿಕ ಸಂಜೆ ವೇಳೆ ಬ್ರಹ್ಮಾವರದ ಚಾಂತಾರು ರೈಲು ಹಳಿ ಬಳಿ ಇರುವ ತಮ್ಮ ದೈವದ ಮನೆಗೆ ಹೋಗಲು ರೈಲ್ವೇ ಟ್ರಾಕ್ ನ್ನು ದಾಟುತ್ತಿದ್ದಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮತ್ಸ್ಯಗಂಧ ಎಕ್ಸ್ ಪ್ರೇಸ್ ರೈಲು ಡಿಕ್ಕಿಯಾಗಿ ಕೆಲವು ದೂರ ಎಸೆಯಲ್ಪಟ್ಟು ತೀವೃ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ಪ್ರದೀಪ ನಾಯ್ಕ ಎಂಬವರು ನೀಡಿದ ಮಾಹಿತಿಯಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.