ಅಪಘಾತಕ್ಕೆ ಒಳಗಾದ ದುಬೈ- ಕೊಯಿಕ್ಕೋಡು ನಡುವಿನ ಏರ್-ಇಂಡಿಯಾ ವಿಮಾನ!

ತಿರುವನಂತಪುರ: (ಉಡುಪಿ ಟೈಮ್ಸ್ ವರದಿ)ದುಬೈ- ಕೊಯಿಕ್ಕೋಡು ನಡುವಿನ ಏರ್-ಇಂಡಿಯಾ ವಿಮಾನ ಲ್ಯಾಂಡಿಗ್ ವೇಳೆ ಅಪಘಾತಕ್ಕೆ ಒಳಗಾದ ಘಟನೆ ಕೊಯಿಕ್ಕೋಡು ಕರಿಪುರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ದುಬೈಯಿಂದ ಕೇರಳದ ಕೋಯಿಕ್ಕೋಡ್’ಗೆ ಆಗಮಿಸಿದ ಎರ್ ಇಂಡಿಯಾ ಬೊಯಿಂಗ್ 1344 ವಿಮಾನವು ಕರಿಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ರನ್-ವೇ ಯಿಂದ ಜಾರಿದ ಪರಿಣಾಮ ವಿಮಾನವು ಎರಡು ತುಂಡಾಗಿದೆ ಎಂದು ತಿಳಿದು ಬಂದಿದೆ.

ಹೀಗೆ ಕಮರಿಗೆ ಉರುಳಿದ ವಿಮಾನ ಇಬ್ಭಾಗವಾಗಿದೆ ಮತ್ತು ಆ ಸ್ಥಳದಿಂದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಪೈಲಟ್ ಸಹಿತ ಒಟ್ಟು ಇಬ್ಬರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳಿಂದ ತಿಳಿದುಬಂದಿದೆ.

ಈ ವಿಮಾನದಲ್ಲಿ ಒಟ್ಟು 180 ಜನರು ಪ್ರಯಾಣಿಸುತ್ತಿದ್ದರು. ಇವರಲ್ಲಿ 174 ಜನ ಪ್ರಯಾಣಿಕರು, 4 ಕ್ಯಾಬಿನ್ ಸಿಬ್ಬಂದಿಗಳು ಮತ್ತು ಇಬ್ಬರು ಪೈಲಟ್ ಗಳು ಸೇರಿದ್ದಾರೆ.

ಪ್ರಯಾಣಿಕರಲ್ಲಿ 10 ಜನ ಮಕ್ಕಳೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದುರ್ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ 24 ಆ್ಯಂಬುಲೆನ್ಸ್ ಗಳು ಘಟನಾ ಸ್ಥಳಕ್ಕೆ ದೌಡಾಯಿಸಿವೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದೆ. ಈ ವಿಮಾನವು ರನ್ ವೇನಲ್ಲಿ ಇಳಿಯುವ ಯತ್ನದಲ್ಲಿ ಪೈಲಟ್ ನಿಯಂತ್ರಣ ತಪ್ಪಿ ಮುಂದಕ್ಕೆ ಜಾರಿ 35 ಅಡಿ ಆಳದ ಕಮರಿಗೆ ಉರುಳಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!