ಉಡುಪಿ: 50ಕ್ಕೂ ಹೆಚ್ಚು ಫಿಶ್‌ನೆಟ್ ನ ಕಾರ್ಮಿಕರಿಗೆ ಕೊರೋನಾ ಪಾಸಿಟಿವ್!
ಉಡುಪಿ: (ಉಡುಪಿ ಟೈಮ್ಸ್ ವರದಿ)ನಗರದ ಹೊರ ವಲಯದ ನಿಟ್ಟೂರಿನ ಮೀನು ಹಿಡಿಯುವ ಬಲೆ ತಯಾರಿಕ ಫ್ಯಾಕ್ಟರಿಯ 50ಕ್ಕೂ ಹೆಚ್ಚು ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಎರಡು ದಿನ ಫ್ಯಾಕ್ಟರಿಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಅಲ್ಲಿನ ಉದ್ಯೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದ ನೂರಾರು ಕಾರ್ಮಿಕರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಫ್ಯಾಕ್ಟರಿಯಲ್ಲಿ ನಾಲ್ಕು ಯುನಿಟ್‌ಗಳಿದ್ದು, ಒಂದು ಸಾವಿರಕ್ಕೂ ಹೆಚ್ಚೂ ಕಾರ್ಮಿಕರು ದುಡಿಯುತ್ತಿದ್ದಾರೆ. ಹಿರಿಯ ಆರೋಗ್ಯ ಅಧಿಕಾರಿಗಳು ಫ್ಯಾಕ್ಟರಿಗೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನೂರಾರು ಕಾರ್ಮಿಕರು ಕೆಲಸ ಮಾಡುವಲ್ಲಿ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಚರಿಸುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲಿಸ ಬೇಕೆಂಬ ಆಗ್ರಹ ಕಾರ್ಮಿಕರು ಮಾಡಿದ್ದಾರೆ.
Fish Net manufacturer should follow the instructions of the government during this difficult time of sevier spreading of Covid 19. Concerned government officials should take immediate action for the protection of the workers health and safety. Several factory and other units, workers safety measures found to be neglected by the mis management. Officers should visit and check such units and take the necessary action.
ಆದಷ್ಟು ಬೇಗ ಪರಿಶೀಲನೆಯನ್ನು ಮಾಡಿ ಇಲ್ಲ ಅನೇಕ ದೂರದ ಕಾರ್ಮಿಕರು ಕೆಲಸ ಮಾಡಿಕೊಂಡು ಇರುತ್ತಾರೆ ಅವರ ಮನೆಯಲ್ಲಿ ಭಯಗೊಡಿದ್ದು ಯಾವ ರೀತಿಯ ಮುಂಜಾಗ್ರತೆ ಮಾಡಿ ಕೆಲಸ ಮಾಡುದಿಲ್ಲ. ಜಿಲ್ಲಾ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು
2dina factory close madidre yenu prayojana ella edrinda adeshto kutumbadavru corona kke baliyagbekaguthe astu munjagrata krama kaigondru yake estondu dodda sankeyalli karmikarige sonku haraditu yendu factory ya adalitha vargakke prashne