ನಾನು ಯಾವ ಹಣವನ್ನೂ ತೆಗೆದುಕೊಂಡು ಎಲ್ಲಿಗೂ ಓಡಿಹೋಗಿಲ್ಲ- ನಟಿ ರಮ್ಯಾ

ಬೆಂಗಳೂರು ಮೇ.12: ಚಿತ್ರರಂಗ ಹಾಗೂ ರಾಜಕೀಯ ರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ ಇದೀಗ ಮತ್ತೆ ಕಾಂಗ್ರೆಸ್ ಪಾಳಯದಲ್ಲಿ ಸುದ್ದಿಯಾಗಿದ್ದಾರೆ. ಇದೀಗ ರಮ್ಯಾ ಅವರು ಕಾಂಗ್ರೆಸ್ ನಿಂದ 8 ಕೋಟಿ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಸುದ್ದಿಗಳ ಬಗ್ಗೆ ಕೋಪಗೊಂಡಿರುವ ರಮ್ಯಾ ಅವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟಣೆ ನೀಡಿರುವ ಅವರು,  ‘ನಾನು ಕಾಂಗ್ರೆಸ್ ಪಕ್ಷದ ನನ್ನ ಜವಾಬ್ದಾರಿಗೆ ರಾಜೀನಾಮೆ ನೀಡಿದ ಬಳಿಕ ನಾನು ಕಾಂಗ್ರೆಸ್ ಪಕ್ಷಕ್ಕೆ 8 ಕೋಟಿ ವಂಚನೆ ಮಾಡಿ ಓಡಿ ಹೋಗಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಲಾಯಿತು. ನನ್ನ ನಿಯತ್ತು, ಸ್ವಾಭಿಮಾನವನ್ನು ಹಾಳು ಮಾಡಲೆಂದೇ ಕೆಲವು ಚಾನೆಲ್‍ಗಳು ಪ್ರಯತ್ನ ಮಾಡಿದವು. ನಾನು ಯಾವ ಹಣವನ್ನೂ ತೆಗೆದುಕೊಂಡು ಎಲ್ಲಿಗೂ ಓಡಿಹೋಗಿಲ್ಲ. ನಾನು ನನ್ನ ವೈಯಕ್ತಿಕ ಕಾರಣಗಳಿಂದ ನನ್ನ ಹುದ್ದೆಗೆ ರಾಜೀನಾಮೆ ನೀಡಿದೆ. ನಾನು ಮಾಡಿದ ಒಂದೇ ಒಂದು ತಪ್ಪೆಂದರೆ ಇಷ್ಟು ದಿನ ಏನೂ ಮಾತನಾಡದೆ ಸುಮ್ಮನೆ ಇದ್ದಿದ್ದು ಎಂದು ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!