ಉಡುಪಿ: ಬೆಳ್ಳಂಬೆಳಗ್ಗೆ ಚೂರಿ ತೋರಿಸಿ 50 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ಉಡುಪಿ: (ಉಡುಪಿ ಟೈಮ್ಸ್ ವರದಿ) ಇಂದು ಬೆಳ್ಳಂಬೆಳಗ್ಗೆ ಚಿನ್ನದ ವ್ಯಾಪರಿಯೊರ್ವನಿಗೆ ಚೂರಿ ತೋರಿಸಿ 1.227 ಕೆ.ಜಿ. ಚಿನ್ನಾಭರಣವನ್ನು ದೋಚಿದ ಘಟನೆ ಬೀಡಿನಗುಡ್ಡೆ ಜಂಕ್ಷನ್ ಬಳಿ ನಡೆದಿದೆ.


ಸೋಮವಾರ ಮುಂಜಾನೆ 5.30 ಸುಮಾರಿಗೆ ವಿಜಯ್ ಜಾದವ್ (37) ಚಿನ್ನವನ್ನು ಕರಗಿಸುವ ಸಲುವಾಗಿ ಬನ್ನಂಜೆಯ ಮನೆಯಿಂದ ತನ್ನ ಅಂಗಡಿಯಾದ ಬೀಡಿನಗುಡ್ಡೆಯ ಶ್ರೀಲಕ್ಷ್ಮೀ ‌ಟ್ರೇಡ್ ಸೆಂಟರ್ಗೆ ಹೋಗುತ್ತಿರುವ ಸಂದರ್ಭ ಇಬ್ಬರು ಅಪರಿಚಿತರು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.


ವಿಜಯ್ ಅವರ ಚಿನ್ನಾಭರಣ ಕರಗಿಸುವ ಅಂಗಡಿ ಎರಡನೇ ಮಹಡಿಗೆ ಹೋಗುತ್ತಿರುವ ಸಂದರ್ಭ ಇಬ್ಬರು ಹೆಲ್ಮ್‌ಟ್,ಮಾಸ್ಕ್ ಧರಿಸಿ ಹಿಂಬಾಲಿಸಿಕೊಂಡು ಬಂದು ವಿಜಯ್ ಅವರನ್ನು ಎಳೆದಾಡಿ, ಚೂರಿ ತೋರಿಸಿ, ಬೆದರಿಸಿ ಅವರ ಚಿನ್ನದ ಗಟ್ಟಿ ಇರುವ ಚೀಲವನ್ನು ಬಲತ್ಕಾರವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೇ ಸಮಯದಲ್ಲಿ ವಿಜಯ್ ಅವರ ಕಿಸೆಯಲ್ಲಿದ್ದ ಮೊಬೈಲ್ ಕಸಿದು ಮೇಲಿನಿಂದ ಕೆಳಕ್ಕೆ ಎಸೆದು ದರೋಡೆಕೊರರು ಪರಾರಿಯಾಗಿದ್ದಾರೆ. ಉಡುಪಿ ನಗರ ಠಾಣಾಧಿಕಾರಿ ಸಕ್ತಿವೇಲು ಸ್ಥಳಕ್ಕಾಗಮಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

3 thoughts on “ಉಡುಪಿ: ಬೆಳ್ಳಂಬೆಳಗ್ಗೆ ಚೂರಿ ತೋರಿಸಿ 50 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

  1. It is high time and each one should take things seriously. Udupi was a safe paradise but treating things lightly will land us on trouble.Let usbe responsible citizens of India and follow rules for our own benifit.If some thing goes wrong nobody will rescue us.

Leave a Reply

Your email address will not be published. Required fields are marked *

error: Content is protected !!