ರಾಷ್ಟ್ರೀಯ ಶಿಕ್ಷಣ ನೀತಿ: ಇಷ್ಟವಾದುದನ್ನೇ ಕಲಿಯಿರಿ- ಪ್ರಧಾನಿ ಮೋದಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲಿಚ್ಛಿಸಿರುವ ನೂತನ ಶಿಕ್ಷಣ ನೀತಿ ಕುರಿತ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆಯ ಸುಧಾರಣೆಗಳ ಕುರಿತ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆಗಳ ಸಮಾವೇಶ’ವನ್ನು ಉದ್ಘಾಟಿಸಿ ಪ್ರಧಾನಿಯವರು ಮಾತನಾಡಿದರು. ಈ ವೇಳೆ 1986ರಲ್ಲಿ ರೂಪಿಸಲಾಗಿದ್ದ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲಾಗಿದ್ದು, 1986ರಲ್ಲಿ ರೂಪಿಸಲಾಗಿದ್ದ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲಾಗುತ್ತಿದ್ದು, ಅದರ ವಿವರಗಳನ್ನು ಅವರು ಉಲ್ಲೇಖಿಸಿದರು. 

‘ಈ ಸಮಾವೇಶ ಅತ್ಯಂತ ಮಹತ್ವದ್ದು. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಜಗತ್ತಿಗೆ ವಿಸ್ತೃತವಾದ ತಿಳಿವಳಿಕೆ ಈ ಸಮಾವೇಶದ ಮೂಲಕ ಲಭಿಸಲಿದೆ. ಶಿಕ್ಷಣ ನೀತಿ ಸ್ಪಷ್ಟವಾಗುತ್ತ ಹೋದಂತೆ ಇದರ ಅನುಷ್ಠಾನವೂ ಖಚಿತವಾಗಿ ಆಗಲಿದೆ. ಈ ಶಿಕ್ಷಣ ನೀತಿಯ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಭಾರತದ ಶಿಕ್ಷಣ ನೀತಿಯ ಬಗ್ಗೆ ಜಗತ್ತು ಮಾತನಾಡಲಾರಂಭಿಸಿದೆ. ಇದು ಆರೋಗ್ಯಪೂರ್ಣ ಚರ್ಚೆಗೆ ಅವಕಾಶ ಒದಗಿಸಿದೆ. ಯಾವುದೇ ವಲಯದವರೂ ಇದನ್ನು ಪೂರ್ವಗ್ರಹಪೀಡಿತವಾದುದು ಎಂದು ಟೀಕಿಸಿಲ್ಲ, ಪ್ರಶ್ನೆ ಮಾಡಿಲ್ಲ.  ಕಳೆದ 3-4 ವರ್ಷಗಳ ಕಾಲ ಸುದೀರ್ಘ ಚರ್ಚೆ, ಲಕ್ಷಾಂತರ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ.

‘ದೇಶದಲ್ಲಿ ದಶಕಗಳ ನಂತರ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಲಾಗುತ್ತಿದೆ. ಈ ನೀತಿ ಕಾಗದದಲ್ಲಿ ಪ್ರಕಟವಾಗಿದೆ, ಆದರೆ ಅನುಷ್ಠಾನ ಸಾಧ್ಯವೇ ಎಂಬ ಸಂದೇಹ ಹಲವರ ಮನಸ್ಸಿನಲ್ಲಿದೆ. ಇದನ್ನು ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರದ್ದೂ ಆಗಿದೆ. ಇದು ಆಗಲೇ ಬೇಕು ಕೂಡ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಅದು ನಮ್ಮಲ್ಲಿ ಇದೆ. ನಾವು ನಿಮ್ಮ ಜತೆಗೆ ಇದ್ದೇವೆ. ಈ ನೀತಿ 21ನೇ ಶತಮಾನದ ಭಾರತವನ್ನು ಬಲಪಡಿಸುವುದಕ್ಕೆ ಇರುವ ಭದ್ರ ಬುನಾದಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯವಿದೆ. ಅವರೆಲ್ಲರೂ ದೇಶ ಕಟ್ಟುವಲ್ಲಿ ಮಹತ್ವದ ಕೊಡುಗೆ ನೀಡಲಿದ್ದಾರೆ. ಪ್ರತಿಯೊಂದು ದೇಶವೂ ಮುನ್ನಡೆಯುವುದು ತನ್ನ ಶಿಕ್ಷಣ ವ್ಯವಸ್ಥೆಯೊಂದಿಗೆ. ಆ ಶಿಕ್ಷಣ ನೀತಿಯಲ್ಲಿ ರಾಷ್ಟ್ರೀಯ ಮೌಲ್ಯಗಳು ಮತ್ತು ಸುಧಾರಣಾ ಕ್ರಮಗಳೂ ಹಾಗೂ ರಾಷ್ಟ್ರೀಯ ಗುರಿಗಳೂ ಇರುತ್ತವೆ. ಈ ನೀತಿ ಹಾಲಿ ಮತ್ತು ಭವಿಷ್ಯದ ತಲೆಮಾರನ್ನು ಭವಿಷ್ಯಕ್ಕೆ ಸಿದ್ಧವಾಗಿರುವಂತೆ ಮಾಡುತ್ತದೆ. ದೊಡ್ಡ ಸುಧಾರಣೆಯನ್ನು ವ್ಯವಸ್ಥೆಯಲ್ಲಿ ತರಬೇಕಾದರೆ ಅದಕ್ಕೆ ಬುನಾದಿಯಾಗಿ ಶಿಕ್ಷಣ ನೀತಿ ಇರಬೇಕಾಗುತ್ತದೆ. ಈಗ ಭಾರತದ ಶಿಕ್ಷಣ ನೀತಿಯ ಕಡೆಗೆ ಎಲ್ಲರ ಗಮನವೂ ಇದೆ. ಈ ಶಿಕ್ಷಣ ನೀತಿ ಭಾರತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ, ಯಶಸ್ವಿಯಾಗಿ ಮುನ್ನಡೆಸಲಿದೆ ಎಂದು ಮೋದಿ ಹೇಳಿದರು.

ಕೌಶಲಾಭಿವೃದ್ಧಿ ಕಡೆಗೆ ಗಮನಹರಿಸಿ
ಪ್ರತಿಯೊಬ್ಬ ವಿದ್ಯಾರ್ಥಿಯೂ ಕೌಶಲವನ್ನು ವೃದ್ಧಿಸಿಕೊಳ್ಳಬಹುದು, ಹೆಚ್ಚುವರಿ ಕೌಶಲ ರೂಢಿಸಿಕೊಳ್ಳಬಹುದು. ಎನ್​ಇಪಿ ಅದಕ್ಕೆ ಅವಕಾಶವನ್ನು ಮಾಡಿಕೊಡುತ್ತದೆ. ಅವರವರ ಆಸಕ್ತಿಯ ಕೌಶಲವನ್ನು ಕಲಿಯುವುದನ್ನು ಮಾಡಬೇಕು.

ಇಷ್ಟವಾದುದನ್ನೇ ಕಲಿಯಿರಿ
ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಇಷ್ಟವಾದುದನ್ನೆ ಕಲಿಯಬೇಕು. ಹಲವು ವಿಷಯಗಳ ಕೋರ್ಸ್ ಮತ್ತು ಮಲ್ಟಿಪಲ್ ಎಂಟ್ರಿ ಮತ್ತು ಎಕ್ಸಿಟ್ ಆಯ್ಕೆಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಯಾವಾಗ ಬೇಕಾದರೂ ವಿದ್ಯಾರ್ಥಿಗಳು ಕೋರ್ಸ್​ ಅನ್ನು ಬಿಡಬಹುದು. ಬೇಕಾದ್ದನ್ನು ಮಾತ್ರವೇ ಕಲಿಯಬಹುದು. ಜಗತ್ತಿಗೆ ಅಗತ್ಯವಿರುವ ತಾಂತ್ರಿಕತೆ ಮತ್ತು ಪ್ರತಿಭೆಗಳನ್ನು ಕೊಡಬಲ್ಲ ಸಾಮರ್ಥ್ಯ ಭಾರತಕ್ಕೆ ಇದೆ. ದೇಶದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪಬಲ್ಲ ಟೆಕ್ನಾಲಜಿ ನಮ್ಮ ಬಳಿ ಇದೆ. ಟೆಕ್ನಾಲಜಿಯು ಕಂಟೆಂಟ್ ಮತ್ತು ಕೋರ್ಸ್​ಗಳನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಶಿಕ್ಷಣದ ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ ಈಗಾಗಲೇ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಲಾಗಿದೆ. ಭವಿಷ್ಯದಲ್ಲಿ ಇನ್ನೂ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆಯನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು.

ನೀತಿ ಬಂಧ
ಶಿಕ್ಷಣ ನೀತಿಯು ಶಿಕ್ಷಣ ಮತ್ತು ಸಂಶೋಧನೆಗಳ ನಡುವಿನ ಕಂದಕವನ್ನು ಹೋಗಲಾಡಿಸಲಿದೆ. ಅದಕ್ಕೆ ಪೂರಕವಾಗುವಂತೆಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಕೋಡಿಂಗ್​, ವರ್ಚುವಲ್ ಲ್ಯಾಬ್​ ಕಾನ್ಸೆಪ್ಟ್​ಗಳು ಶಿಕ್ಷಣ ಕ್ಷೇತ್ರದಲ್ಲಿ ಭಾರತವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿದೆ. ನಮ್ಮ ವಿದ್ಯಾರ್ಥಿಗಳನ್ನು ಜಾಗತಿ ಪ್ರಜೆಗಳನ್ನಾಗಿ ಮಾಡುವ ಕಡೆಗೆ ಗಮನಹರಿಸಬೇಕು. ಆದರೆ ಅವರು ತಾಯ್ನೆಲದ ಜತೆಗೆ ಸಂಪರ್ಕ ಕಳೆದುಕೊಳ್ಳಬಾರದು. ಬೇರು ಅವರದ್ದು ಇಲ್ಲೇ ಇರಬೇಕು. ಶಿಕ್ಷಣ ನೀತಿಯೂ ಅದನ್ನೆ ಪಾಲಿಸುತ್ತದೆ.  ಈಗಿರುವ ಶಿಕ್ಷಣ ವ್ಯವಸ್ಥೆಯು ಏನನ್ನು ಚಿಂತನೆ ನಡೆಸಬೇಕು ಎಂಬುದನ್ನು ಕಲಿಸುತ್ತದೆ. ಆದರೆ, ಈ ಹೊಸ ಶಿಕ್ಷಣ ನೀತಿಯ ಹೇಗೆ ಚಿಂತನೆ ನಡೆಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಆದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಏನನ್ನು ಕಲಿಯಬೇಕು, ಯಾವುದನ್ನು ನೋಡಬೇಕು ಎಂಬ ವಿವೇಚನೆ ಇರಬೇಕಾದ್ದು ಅವಶ್ಯತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು

Leave a Reply

Your email address will not be published. Required fields are marked *

error: Content is protected !!