ಭೂ ಕುಸಿತ ಭೀತಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಅಲಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಕೊಡಗು ಜಿಲ್ಲಾಧಿಕಾರಿ ಕಚೇರಿ ಬಳಿಯೂ ಭೂ ಕುಸಿತ ಉಂಟಾಗುತ್ತಿದ್ದು, ಇದರಿಂದ ಕಚೇರಿಯನ್ನು ತಾತ್ಕಾಲಿಕ ಸ್ಥಳಾಂತರ ಮಾಡಲಾಗಿದೆ.

ಮಡಿಕೇರಿ – ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿರುವುದರಿಂದ ತಜ್ಞರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಪ್ರಮುಖ ವಿಭಾಗಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮಡಿಕೇರಿ ನಗರಸಭಾ ಕಾಯಾ೯ಲಯಕ್ಕೆ ಪ್ರಕೃತಿ ವಿಕೋಪ ಸಂಬಂಧಿತ ಕಚೇರಿ ಸ್ಥಳಾಂತರ ಮಾಡಲಾಗಿದ್ದು, ಉಳಿದ ಇಲಾಖಾ ಕಚೇರಿಗಳು ಸದ್ಯಕ್ಕೆ ಬಂದ್ ಮಾಡಲಾಗಿದೆ. ನಗರಸಭಾ ಕಾಯಾ೯ಲಯದಿಂದಲೇ ಮಳೆ ಇಳಿಮುಖಗೊಳ್ಳುವವರೆಗೆ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ.

2013ರಲ್ಲಿ ಈ ಕಟ್ಟಡ ಉದ್ಘಾಟನೆಗೊಂಡಿದ್ದು, ಈ ಕಟ್ಟದಲ್ಲಿ ಒಟ್ಟು ಮೂರು ಮಹಡಿಗಳಿವೆ. ಬರೆ ಕುಸಿದ ಹಿನ್ನೆಲೆ ಕಟ್ಟಡಕ್ಕೂ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಗರಸಭೆಗೆ ಜಿಲ್ಲಾಡಳಿತದ ಆಡಳಿತ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಹಾಗೇ ಕಂಟ್ರೋಲ್‌ ರೂಂ ಕೂಡ ನಗರಸಭೆಗೆ ಸ್ಥಳಾಂತರಗೊಂಡಿದೆ. 

ಕೊಡಗಿನಲ್ಲಿ ಈ ಬಾರಿಯು ಭಯಕಂರ ಮಳೆ ಸುರಿಯುತ್ತಿದೆ. ನಿನ್ನೆ ತಲೆಕಾವೇರಿ ಅರ್ಚಕರ ಮನೆ ಬೇಲೆ ಭೂ ಕುಸಿತ ಉಂಟಾಗಿದ್ದು ಸಂಪೂರ್ಣ ಮನೆಯೆ ನೆಲಸಮವಾಗಿದೆ. ಅರ್ಚಕರು ಕೂಡ ಸಾವನಪ್ಪಿದ್ದಾರೆ. ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ಕೂಡ ಇನ್ನು ಸರಿಯಾಗಿ ನಡೆದಿಲ್ಲ. ಕಳೆದ 2018ರಲ್ಲೂ ಭಾರೀ ಮಳೆ ಸುರಿದ ಹಿನ್ನೆಲೆ ಅನೇಕರು ಮನೆ, ಮಠ ಕಳೆದುಕೊಂಡಿದ್ದರು. ಪ್ರಾಣ ಹಾನಿ ಕೂ ಸಂಭವಿಸಿತ್ತು. 

Leave a Reply

Your email address will not be published. Required fields are marked *

error: Content is protected !!