ಅಮಿತ್ ಶಾ ಭೇಟಿ ವೇಳೆ ರೂ. 850 ಬೆಲೆಯ ನೀರಿನ ಬಾಟಲು ನೀಡಲಾಗಿತ್ತು- ಗೋವಾ ಕೃಷಿ ಸಚಿವ
ಪಣಜಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ, ಅವರಿಗೆ ರೂ.850 ಬೆಲೆಯ ನೀರಿನ ಬಾಟಲು ನೀಡಲಾಗಿತ್ತು ಎಂದು ಗೋವಾ ಕೃಷಿ ಸಚಿವ ರವಿ ನಾಯ್ಕ ಮಂಗಳವಾರ ಹೇಳಿದ್ದಾರೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎಷ್ಟು ಭೀಕರವಾಗಿರಲಿದೆ ಹಾಗೂ ಮಳೆ ನೀರು ಸಂಗ್ರಹದ ಅಗತ್ಯತೆ ಕುರಿತು ವಿವರಿಸುವ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಫೆಬ್ರುವರಿಯಲ್ಲಿ ನಡೆದ ಚುನಾವಣೆ ವೇಳೆ ರಾಜ್ಯಕ್ಕೆ ಭೇಟಿ ನೀಡಿದ್ದ ಶಾ ಅವರು ಹಿಮಾಲಯ ಬ್ರ್ಯಾಂಡ್‌ನ ನೀರಿನ ಬಾಟಲು ನೀಡುವಂತೆ ಹೇಳಿದರು. ಇಲ್ಲಿಂದ 10 ಕಿ.ಮೀ. ದೂರದ ಮಾಪುಸಾದಿಂದ ರೂ. 850 ಬೆಲೆಯ, ಆ ಬ್ರ್ಯಾಂಡಿನ ನೀರಿನ ಬಾಟಲು ತರಿಸಿ ಕೊಡಲಾಗಿತ್ತು ಎಂದು ಹೇಳಿದರು.