| ನವದೆಹಲಿ ಮೇ.5: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪಬ್ ವೊಂದರಲ್ಲಿ ಮಹಿಳೆಯ ಜೊತೆ ಕಾಣಿಸಿಕೊಂಡಿದ್ದ ವೈರಲ್ ವಿಡಿಯೋಗೆ ಸಂಬಂಧಿಸಿ ಅಸಲಿ ಸತ್ಯ ಬಯಲಾಗಿದೆ.
ಈ ವೈರಲ್ ವಿಡಿಯೋಗೆ ಸಂಬಂಧಿಸಿ “ಚೀನಾದ ರಾಯಭಾರಿಯ ಜತೆ ನೇಪಾಳದ ಪಬ್‍ನಲ್ಲಿ ರಾಹುಲ್ ಗಾಂಧಿ ಅವರು ಕಾಣಿಸಿಕೊಂಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿತ್ತು. ಇದೀಗ ಈ ಆರೋಪಕ್ಕೆ ಉತ್ತರವೆಂಬಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ರಾಹುಲ್ ಗಾಂಧಿ ಅವರ ಜೊತೆ ಕಾಣಿಸಿಕೊಂಡಿರುವ ಮಹಿಳೆ ಚೀನಾದ ರಾಯಭಾರಿ ಅಲ್ಲ ಎಂದು ಮಧ್ಯಮವೊಂದು ವರದಿ ಮಾಡಿದ್ದು, ರಾಹುಲ್ ಗಾಂಧಿ ಅವರು “ಸಿಎನ್.ಎನ್ ಸುದ್ದಿಸಂಸ್ಥೆಯ ದೆಹಲಿ ವರದಿಗಾರ್ತಿ ಸುಮ್ನಿಮಾ ಉದಾಸ್ ಅವರ ಮದುವೆ ಸಮಾರಂಭದ ಭಾಗಿಯಾಗಲು ನೇಪಾಳಕ್ಕೆ ಭೇಟಿ ನೀಡಿದ್ದರು. ಸುಮ್ನಿಮಾ ಅವರ ತಂದೆ ಬಿಮಾ ಉದಾಸ್ ಅವರು ಮ್ಯಾನ್ಮಾರ್‍ಗೆ ನೇಪಾಳದ ರಾಯಭಾರಿಯಾಗಿದ್ದರು. ಪಬ್ ನಿರ್ವಾಹಕರನ್ನು ಸಂಪರ್ಕಿಸಿದಾಗ, ಚೀನಾದ ಯಾವ ರಾಯಭಾರಿಯೂ ರಾಹುಲ್ ಜೊತೆ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೂ ರಾಹುಲ್ ಗಾಂಧಿ ಅವರ ಜೊತೆ ಇರುವ ಮಹಿಳೆಯು ಮದುಮಗಳ ಗೆಳತಿ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇನ್ನು ಕಾಂಗ್ರೆಸ್ ಬಿಕ್ಕಟ್ಟಿನಲ್ಲಿರುವಾಗ ರಾಹುಲ್ ಅವರು ನೈಟ್‍ಕ್ಲಬ್‍ನಲ್ಲಿದ್ದಾರೆ’ ಎಂದು ಮುಖಂಡ ಅಮಿತ್ ಮಾಳವೀಯ ಟ್ವಿಟ್ ಮಾಡಿದ್ದರು. ಹಾಗೂ ‘ಭಾರತದ ವಿರುದ್ಧ ಸಂಚು ರೂಪಿಸಲು ರಾಹುಲ್ ಅವರು ಚೀನಾ ರಾಯಭಾರಿ ಜತೆಗೆ ಮಾತನಾಡಲು ನೇಪಾಳಕ್ಕೆ ಹೋಗಿದ್ದಾರೆ’ ಎಂಬ ವಿವರ ಇರುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿದ್ಯಮಾನದಿಂದ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರ ಉಂಟಾಗಿತ್ತು.
| |