ಕಿದಿಯೂರು: ರಾಮ ಭಕ್ತರಿಂದ ಸಂಭ್ರಮಾಚರಣೆ, ಕರ ಸೇವಕರಿಗೆ ಸನ್ಮಾನ
ಉಡುಪಿ: ಆಗಸ್ಟ್ 5 ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹ ದಿನ. ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕ್ಕೆ ಭೂಮಿ ಪೂಜೆ ನಡೆಸುವ ಮೂಲಕ ಕೋಟ್ಯಾಂತರ ದೇಶವಾಸಿಗಳ ಮತ್ತು ರಾಮ ಭಕ್ತರ ಶತಮಾನಗಳ ಕನಸು ನನಸಾಗಿದೆ. ಹಿರಿಯರ ನಿರಂತರ ಹೋರಾಟ ಹಾಗೂ ಕರ ಸೇವಕರ, ತ್ಯಾಗ, ಬಲಿದಾನದ ಮೂಲಕ ದೊರೆತಿರುವ ಈ ಅಪೂರ್ವ ಕ್ಷಣ ಅವಿಸ್ಮರಣೀಯ. ಅಯೋಧ್ಯೆಯಲ್ಲಿ ಅತೀ ಶೀಘ್ರವಾಗಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣವಾಗಿ ದೇಶ ಸುಭಿಕ್ಷವಾಗಲಿ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಆ.5 ರಂದು ಅಯೋಧ್ಯೆಯ ಶ್ರೀ ರಾಮ ಮಂದಿರ ಭೂಮಿ ಪೂಜನ ಪ್ರಯುಕ್ತ ಕಿದಿಯೂರು ವನದುರ್ಗಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಿದಿಯೂರು ಪರಿಸರದ ಗ್ರಾಮಸ್ಥರು ಮತ್ತು ಕಾರ್ಯಕರ್ತರಿಂದ ನಡೆದ ಸಾಮೂಹಿಕ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಯೋಧ್ಯೆಯಲ್ಲಿ ಕರ ಸೇವಕರಾಗಿ ಸೇವೆ ಸಲ್ಲಿಸಿದ್ದ ಪ್ರೇಮನಾಥ್ ಕಿದಿಯೂರು- ಪಡುಕರೆಯವರನ್ನು ಶಾಲುಹೊದಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ತಾ. ಪಂ. ಸದಸ್ಯ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ. ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್ ಅಂಬಲಪಾಡಿ, ವೆಂಕಟರಮಣ ಕಿದಿಯೂರು, ಗ್ರಾ. ಪಂ. ಸದಸ್ಯ ಸುಂದರ ಪೂಜಾರಿ, ನಿವೃತ್ತ ತಹಶೀಲ್ದಾರ ವಿಶ್ವನಾಥ್ ಅಮೀನ್ ಕಿದಿಯೂರು, ಶ್ರೀ ರಾಮಸೇನೆಯ ಮುಖ್ಯಪ್ರಾಣ ಘಟಕ ಮಲ್ಪೆ ಅಧ್ಯಕ್ಷ ಸಂತೋಷ್ ಕರ್ಕೆರ, ಗೌರವಾಧ್ಯಕ್ಷ ಕಿಶೋರ್, ಪ್ರಮುಖರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಿದಿಯೂರು, ಗಿರೀಶ್ ಅಮೀನ್ ಕಿದಿಯೂರು, ರಾಮರಾಜ್ ಕಿದಿಯೂರು, ಅನಿಲ್ ಕಿದಿಯೂರು, ರಾಜೇಶ್ ಸುವರ್ಣ, ರಾಜೀವ ಪೂಜಾರಿ, ಅಕ್ಷಯ್ ಕುಮಾರ್, ನವೀನ್ ಕುಂದರ್, ಪಾಂಡುರಂಗ ಕುತ್ಪಾಡಿ, ಕಾರ್ಯಕರ್ತರು ಹಾಗೂ ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು.