ಉಡುಪಿ: ಏರಿಕೆ ಮಾಡಿದ್ದ ಖಾಸಗಿ ಬಸ್ ದರ ಮರುಪರಿಷ್ಕರಿಸುವಂತೆ ಮನವಿ
ಉಡುಪಿ ಮೇ.3(ಉಡುಪಿ ಟೈಮ್ಸ್ ವರದಿ): ಕೋವಿಡ್ ಸಂದರ್ಭದಲ್ಲಿ ಏರಿಕೆ ಮಾಡಿದ್ದ ಖಾಸಗಿ ಬಸ್ ದರವನ್ನು ಮರುಪರಿಷ್ಕರಿಸುವಂತೆ ಸಾರ್ವಜನಿಕ ಪ್ರಯಾಣಿಕರ ವತಿಯಿಂದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಕೆ.ಎಂಸಿ ನೌಕರರು ಮತ್ತು ಸಾರ್ವಜನಿಕರ ಪರವಾಗಿ ಶಿವಕುಮಾರ್ ಶೆಟ್ಟಿಗಾರ್ ಎಂಬವರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದು, ಕಳೆದ ವರ್ಷ ಜೂನ್ 1 ರಿಂದ ಖಾಸಗಿ ಬಸ್ ದರವನ್ನು ಶೇ. 25 ರಷ್ಟು ಹೆಚ್ಚಿಸಲಾಗಿದೆ. ಇದು ಕೊರೋನಾ ಹಿನ್ನೆಲೆಯಲ್ಲಿ ಕೇವಲ 50 ಶೇ. ಆಸನ ಭರ್ತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿತ್ತು. ಪ್ರಸ್ತುತ ಕೊರೋನಾ ಪ್ರಕರಣ ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತು ಎಲ್ಲಾ ಖಾಸಗಿ ಬಸ್ ಗಳಲ್ಲಿ 100 ಶೇ. ಆಸನ ಭರ್ತಿ ಮಾಡುವ ಅವಕಾಶ ವಿರುವುದರಿಂದ. ಈ ಹಿಂದೆ ಹೆಚ್ಚಳ ಮಾಡಿರುವ ದರವನ್ನು ಪರಿಷ್ಕರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.