ಶಂಕರಪುರ: “ಕ್ಯಾನರಿ ಗಾರ್ಡನ್” ತೆರೆದ ಸಭಾಭವನ ಲೋಕಾರ್ಪಣೆ

ಉಡುಪಿ ಮೇ.3(ಉಡುಪಿ ಟೈಮ್ಸ್ ವರದಿ): ಶುಭ ಸಮಾರಂಭಗಳ ಆಚರಣೆಗಾಗಿ ಶಂಕರಪುರದ ಇನ್ನಂಜೆಯ ರೈಲ್ವೆ ಸ್ಟೇಷನ್ ರಸ್ತೆ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ “ಕ್ಯಾನರಿ ಗಾರ್ಡನ್” ತೆರೆದ ಸಭಾಭವನ ಲೋಕಾರ್ಪಣೆಗೊಂಡಿದೆ.

ಈ ಶುಭ ಸಮಾರಂಭದಲ್ಲಿ ಕಾರ್ಕಳದ ಅತ್ತೂರಿನ ಸೈಂಟ್ ಲಾರೆನ್ಸ್ ಬಸಲಿಕಾ ಚರ್ಚ್ ನ ಧರ್ಮಗುರು ರೆ.ಫಾ. ಅಲ್ಬನ್ ಡಿಸೋಜಾ ಅವರು ಮಾತನಾಡಿ, ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ವಿವಿಧ ಸಮಾರಂಭ ಗಳನ್ನು ನಡೆಸಲು ವ್ಯವಸ್ಥೆ ಕಲ್ಪಿಸುವ ಯೋಜನೆ ಉತ್ತಮವಾದ ಆಲೋಚನೆಯಾಗಿದೆ.

ಅತ್ಯುತ್ತಮವಾದ ಪರಿಸರದಲ್ಲಿ 4.5 ಎಕರೆಗಿಂತಲೂ ಅಧಿಕ ಜಾಗದಲ್ಲಿ ಅತ್ಯಂತ ಸುಸಜ್ಜಿತವಾದ ವ್ಯವಸ್ಥೆಗಳೊಂದಿಗೆ ನಗರ ಮತ್ತು ಪಟ್ಟಣಕ್ಕೆ ಸರಿಹೊಂದುವ ವಿಶಾಲ ಮೈದಾನವನ್ನು ನಿರ್ಮಿಸಲಾಗಿದೆ. ಇಲ್ಲಿ ಎಲ್ಲಾ ರೀತಿಯ ಸೌಕರ್ಯವಿದೆ. ಹೆಚ್ಚಿನ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವಿದೆ. ಒಂದೇ ಸೂರಿನಡಿಯಲ್ಲಿ ಎಲ್ಲಾ ಬಗೆಯ ಕಾರ್ಯವನ್ನು ನಡೆಸಲು ಸಾಧ್ಯವಸಹುವಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ‌ ಎಂದು ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಉದ್ಯಾವರದ ಸೈಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್ ನ ಧರ್ಮ ಗುರು ವಂ.ರೆ.ಫಾ.ಸ್ಟ್ಯಾನಿ ಬಿ.ಲೋಬೊ, ಚಿತ್ರದುರ್ಗದ ಹಿರಿಯೂರಿನ ಅವರ್ ಲೇಡಿ ಆಫ್ ಅಸಮ್ಪಶನ್ ಚರ್ಚ್ ನ ಧರ್ಮಗುರು ರೆ.ಫಾ ಫ್ರಾಂಕ್ಲಿನ್ ಡಿಸೋಜಾ, ಸಂಸ್ಥೆಯ ಮಾಲಕರಾದ ಫ್ರಾಂಕಿ ಕ್ರಾಸ್ಟೋ, ಸಾಂಡ್ರಾ ಕ್ರಾಸ್ಟೋ ಉಪಸ್ಥಿತರಿದ್ದರು.

ಈ ನೂತನ ತೆರೆದ ಮೈದಾನದಲ್ಲಿ ಆರಂಭಗೊಳ್ಳುತ್ತಿರುವ ಕೆನರಿ ಗಾರ್ಡನ್ ಸಭಾಭವನ 4.5 ಚದರ ವಿಸ್ತೀರ್ಣ ದಲ್ಲಿ ರೂಪುಗೊಂಡಿದೆ. ಇಲ್ಲಿ ಯಾವುದೇ ಜಾತಿ ಧರ್ಮದ ಹಂಗು ಇಲ್ಲದೆ ಎಲ್ಲಾ ವರ್ಗದವರಿಗೂ ಮಕ್ತವಾಗಿ ಅವರ ಮನೆಯ ಶುಭಸಮಾರಂಭಗಳನ್ನು ಆಯೋಜಿಸಲು ಅವಕಾಶ ಇದ್ದು, ಮದುವೆ ಸಮಾರಂಭಗಳಿಗೆ ಹವಾನಿಯಂತ್ರಿತ ಡ್ರೆಸ್ಸಿಂಗ್ ರೂಮ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

1 ಎಕರೆ ಪ್ರದೇಶವನ್ನು ಕಾರ್ಯಕ್ರಮ ನಡೆಸಲು ಮೀಸಲಿಟ್ಟಿದ್ದು, 1500 ಜನಸಂಖ್ಯೆ ಯನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಬಹುದಾಗಿದೆ. ಹಾಗೂ 2.5  ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ದ್ವಿಚಕ್ರ ವಾಹನ ಮತ್ತು ಇತರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

ಕಾರ್ಯಕ್ರಮವನ್ನು ಸ್ಟೀವನ್ ಕುಲಾಸೋ ಉದ್ಯಾವರ ನಿರ್ವಹಿಸಿದರು.

ಇಲ್ಲಿ ಕಾರ್ಯಕ್ರಮ ಆಯೋಜಿಸಲಿಚ್ಚಿಸುವವರು ಮೊ: 9845141816 ಸಂಖ್ಯೆಯನ್ನು ಸಂಪರ್ಕಿಸುವಂತೆ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!