ಈದುಲ್ ಫಿತ್ರ್: ಕಾಪು ಮುಸ್ಲಿಮ್ ಒಕ್ಕೂಟದಿಂದ ಸಿಹಿ ಹಂಚಿಕೆ

ಉಡುಪಿ: ಈದುಲ್ ಫಿತ್ರ್ ಹಬ್ಬದ ನಮಾಜ್ ನಿರ್ವಹಿಸಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಂಡವು ಕಾಪು ತಾಲೂಕು ಅಧ್ಯಕ್ಷ ಜನಾಬ್ ಶಬೀಹ್ ಅಹಮದ್ ಕಾಝೀ ಯವರ ನೇತೃತ್ವದಲ್ಲಿ ಕಾಪುವಿನ ವ್ರತ್ತ ನಿರೀಕ್ಷಕ ಕಚೇರಿಯಿಂದ ಕಾಪು ಪೊಲೀಸ್ ಠಾಣೆ ತನಕದ ಹಿಂದೂ ಸಹೋದರರ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಸೌಹಾರ್ದತೆಯ ಸಂದೇಶದೊಂದಿಗೆ ಸಿಹಿ ತಿಂಡಿಯನ್ನು ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ವ್ರತ್ತ ನಿರೀಕ್ಷಕ ಅಧಿಕಾರಿ ಪ್ರಕಾಶ್ ರವರು ಹಾಗೂ ಠಾಣಾಧಿಕಾರಿ ರಾಘವೇಂದ್ರರವರು ಇಂತಹ ಕಾರ್ಯಕ್ರಮದಿಂದ ಸಮಾಜದಲ್ಲಿ ಪ್ರೀತಿ, ಪ್ರೇಮ, ಸಹೋದರತ್ವ ಗಟ್ಟಿಗೊಳ್ಳುತ್ತದೆ ಎಂದರು. ಹಿಂದೂ, ಮುಸ್ಲಿಮರು ಈ ದೇಶದಲ್ಲಿ ಹಿಂದಿನಿಂದಲೂ ಅನೋನ್ಯತೆಯಿಂದ ಇದ್ದು, ಮುಂದಿನ ದಿನಗಳಲ್ಲೂ ನಮ್ಮ, ನಿಮ್ಮ ಸಂಬಂಧ ಹೀಗೆಯೇ ಇರಲಿ ಎಂದು ಉದ್ಯಮಿ ಹರೀಶ್ ನಾಯಕ್ ರವರು ಹೇಳಿದರು. ಒಕ್ಕೂಟದ ಈ ಕಾರ್ಯಕ್ರಮವು ಜನರಲ್ಲಿ ತುಂಬಾ ಪ್ರಭಾವ ಬೀರಿದ್ದು, ತಂಡದಲ್ಲಿ ಜಿಲ್ಲಾ ಉಪಾಧ್ಯಕ್ಷ ಅನ್ವರ್ ಅಲಿ ಕಾಪು, ಪದಾಧಿಕಾರಿಗಳದ ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರು, ನಸೀರ್ ಅಹಮದ್, ಮುಸ್ತಾಕ್ ಇಬ್ರಾಹೀಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!