ರಾಜ್ಯದಲ್ಲಿ ಶೀಘ್ರವೇ ಕ್ಯಾಬಿನೆಟ್ ವಿಸ್ತರಣೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು ಮೇ.3: ರಾಜ್ಯದಲ್ಲಿ ಶೀಘ್ರವೇ ಕ್ಯಾಬಿನೆಟ್ ವಿಸ್ತರಣೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು,  2-3 ದಿನಗಳಲ್ಲಿ ಕ್ಯಾಬಿನೆಟ್ ವಿಸ್ತರಣೆ ನಿಶ್ಚಿತವಾಗಿ ಆಗುತ್ತದೆ ಎಂಬ ವಿಶ್ವಾಸವಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಆದರೆ ನಾನಿನ್ನು ಅವರನ್ನು ಭೇಟಿ ಮಾಡಿಲ್ಲ. ಆದರೆ ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ನಿಶ್ಚಿತವಾದ ತೀರ್ಮಾನ ತೆಗೆದುಕೊಂಡೆ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ ಎಂದುಕೊಂಡಿದ್ದೇನೆ ಎಂದು ಹೇಳಿದರು. ಇದೇ ವೇಳೆ ಸಿಎಂ ಬದಲಾವಣೆಯ ಯಾವುದೇ ಸುದ್ದಿಯಿಲ್ಲ. ಅದೆಲ್ಲವೂ ಊಹಾಪೋಹ ಎಂದ ಅವರು, ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ಮೋದಿ ಅವರ ಜೊತೆ ಚರ್ಚಿಸಿ ತೀರ್ಮಾನ ಮಾಡಬಹುದು ನಂತರ ಆದಷ್ಟು ಬೇಗ ಕ್ಯಾಬಿನೆಟ್ ವಿಸ್ತರಣೆ ಆಗುತ್ತದೆ ಎಂದ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!