ಉಡುಪಿ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ರೂ. 33ಲಕ್ಷ ವಂಚನೆ

ಉಡುಪಿ ಮೇ.3(ಉಡುಪಿ ಟೈಮ್ಸ್ ವರದಿ): ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದ ಉಡುಪಿ ಮೂಲದ‌ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಕುರಿತು ಕೋಲಾರ ಮೂಲದ ನಿತಿನ್ ಕುಮಾರ್ ಎಂಬಾತನ ವಿರುದ್ಧ ಉಡುಪಿ ಸೆನ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ಧನಿರಾಮ್ ಕಂಪನಿಯಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿರುವ ಉಡುಪಿ ಮೂಲದ‌ ಶಾಲಿನಿ ಅವರು ಅದೇ ಕಂಪೆನಿಯಲ್ಲಿ 2021 ರ ಡಿಸೆಂಬರ್ ತಿಂಗಳ ಅವಧಿಯಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಕೆಲಸದಲ್ಲಿದ್ದ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿಯಾದ ನಿತೀನ್ ಕುಮಾರ್ ಎಂಬಾತನ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ.

ಶಾಲಿನಿ ಅವರನ್ನು ಪರಿಚಯ ಮಾಡಿಕೊಂಡಿದ್ದ ನಿತೀನ್ ಕುಮಾರ್ ದುಬೈ ಕಂಪನಿಯಲ್ಲಿ ಹಾಗೂ ನಂತರದ ದಿನದಲ್ಲಿ ಅಮೇರಿಕಾದ ಮನಿಮೇಕರ್ ಟೆಕ್ಸ್ ಝೋನ್ ಪ್ರೈ ಲಿ ಕಂಪನಿಯಲ್ಲಿ ಫ್ಲೋರ್ ಮ್ಯಾನೇಜರ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಇದನ್ನು ನಂಬಿದ ಶಾಲಿನಿ ಅವರು ಆತನು ಹೇಳಿದಂತೆ ಹಂತ ಹಂತವಾಗಿ ಒಟ್ಟು 33,65,801ರೂ. ಹಣವನ್ನು ನಿತೀನ್ ಕುಮಾರ್ ನ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ಆತ ಕೆಲಸ ಕೊಡಿಸದೇ ಹಣವನ್ನು ವಾಪಾಸು ನೀಡದೇ ವಂಚಿಸಿದ್ದಾನೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!