ಬೈಂದೂರು: ಮನೆಗೆ ನುಗ್ಗಿ ಜೀವ ಬೆದರಿಕೆ- ಐವರ ವಿರುದ್ಧ ದೂರು

ಬೈಂದೂರು ಮೇ.3 (ಉಡುಪಿ ಟೈಮ್ಸ್ ವರದಿ): ಇಲ್ಲಿನ ಮೊಹಮ್ಮದ್ ಫೈಸೂಲ್ ಬ್ಯಾರಿ ಅವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ಗಲಾಟೆ ಮಾಡಿ,ಜೀವ ಬೆದರಿಕೆ ಹಾಕಿರುವ ಬಗ್ಗೆ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಮೊಹಮ್ಮದ್ ಪೈಸೂಲ್ ಬ್ಯಾರಿ ಅವರು ಬೈಂದೂರು ಜಾಮೀಯಾ ಮಸೀಧಿಯಲ್ಲಿ ಇಮಾಮ್ ಖತೀಬ್ ಆಗಿ ಸುಮಾರು 25 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಅವರ ಹೆಂಡತಿ ಮಕ್ಕಳೊಂದಿಗೆ ಜಾಮೀಯಾ ಮಸೀಧಿಗೆ ಸಂಬಂದಿಸಿದ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೇ.2 ರಂದು ಸಂಜೆ ವೇಳೆ ಇವರ ಮನೆಗೆ ಮೊಹಮ್ಮದ್ ಸುಲ್ತಾನ್, ಮೊಹಮ್ಮದ್ ಅಕ್ಬರ್, ಅಬ್ದುಲ್ ಸುಹಾನ್, ಪೈಜಾನ್, ಮುತಿ ಉರ್ ರೆಹಮಾನ್ ಎಂಬವರು ಇತರರೊಂದಿಗೆ ಬಂದು ಮೊಹಮ್ಮದ್ ಫೈಸೂಲ್ ಬ್ಯಾರಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!