ಮಹಿಳೆಯರು ಸಶಕ್ತರಾಗಲು ರಾಜೇಂದ್ರ ಕುಮಾರ್ ಪ್ರಯತ್ನ ಶ್ಲಾಘನೀಯ- ಸುನಿಲ್ ಕುಮಾರ್

ಮಣಿಪಾಲ ಮೇ.2 (ಉಡುಪಿ ಟೈಮ್ಸ್ ವರದಿ): ಮಹಿಳಾ ಬ್ಯಾಂಕ್ ಸ್ಥಾಪಿಸುವ ಮೂಲಕ ಇಡೀ ರಾಜ್ಯದಲ್ಲಿ ಮಹಿಳಾ ಶಕ್ತಿ ಬ್ಯಾಂಕಿಗ್ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂಬ ಇಚ್ಚೆಯನ್ನು ರಾಜ್ಯ ಸರಕಾರ ಹೊಂದಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಹೇಳಿದರು.

ಇಂದು ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ (ಎಸ್.ಸಿ.ಡಿ.ಸಿ.ಸಿ) ಬ್ಯಾಂಕಿನ 111ನೇ ಶಾಖೆಯನ್ನು ಮಣಿಪಾಲದಲ್ಲಿ ಉದ್ಘಾಟಿಸಿ, ಬಳಿಕ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಹಳ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ. ಕರ್ನಾಟಕ ಸರಕಾರ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಎನ್ನುವ  ದೃಷ್ಟಿಯಿಂದ ಒಂದು ಮಹಿಳಾ ಬ್ಯಾಂಕ್ ನ್ನು  ನಿರ್ಮಾಣ ಮಾಡಬೇಕು ಎನ್ನುವ ಆಲೋಚನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಅದಕ್ಕಾಗಿ ಮೂಲ ಬಂಡವಾಳವನ್ನು 200 ಕೋ.ನೀಡುವ ಮುಖಾಂತರ ಮಹಿಳಾ ಬ್ಯಾಂಕ್ ಸ್ಥಾಪಿಸುವ ಮೂಲಕ ಇಡೀ ರಾಜ್ಯದಲ್ಲಿ ಮಹಿಳಾ ಶಕ್ತಿ ಬ್ಯಾಂಕಿಗ್ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂಬ ಇಚ್ಚೆಯನ್ನು ನಮ್ಮ ಸರಕಾರ ಹೊಂದಿದೆ. ಮುಖ್ಯಮಂತ್ರಿಯವರು ಈ ನಿಟ್ಟಿನಲ್ಲಿ ವಿಶೇಷವಾದ ಯೋಜನೆಗೆ ಬ್ಯಾಂಕ್’ನ್ನು ರಾಜ್ಯದಲ್ಲಿ ಘೋಷಿಸುವ ಮೂಲಕ ಸರಕಾರ ಮಹಿಳಾ ಪರವಾದ ಸರಕಾರ ಎಂಬ ಸಂದೇಶವನ್ನು ಬಜೆಟ್’ನಲ್ಲಿ ನೀಡಿದ್ದಾರೆ ಎಂದು ತಿಳಿಸಿದರು.

ನವೋದಯ ಸಹಕಾರಿ ಸಂಘಟದ ಸದಸ್ಯರಾಗಿದ್ದುಕೊಂಡು ಕಳೆದ ಕೆಲವು ವರ್ಷಗಳಿಂದ ನಾವೆಲ್ಲರೂ ಕೂಡಾ ಆರ್ಥಿಕ ವಹಿವಾಟನ್ನು ಶಿಸ್ತು ಬದ್ಧವಾಗಿ ಮಾಡುತ್ತಿದ್ದೇವೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಸಿಕ್ಕಿತು ಎಂದಾದರೆ ಒಂದು ಕುಟುಂಬ ಅತ್ಯಂತ ಸಬಲೀಕರಣ ಅಯಿತು ಎನ್ನುವುದನ್ನು ಅರ್ಥಮಾಡಿ ಕೊಳ್ಳಬೇಕು. ಮಹಿಳೆಯರು ಪುರುಷರಿ ಗಿಂತ ಕಡಿಮೆ ಇಲ್ಲ ಎಂಬುದನ್ನು ಆರ್ಥಿಕ ವ್ಯವಹಾರದಲ್ಲಿ ಅತ್ಯಂತ ಶಿಸ್ತನ್ನು ತಾಳ್ಮೆಯನ್ನು ಪ್ರಾಮಾಣಿಕತೆಯನ್ನು ಸ್ವಸಹಾಯ ಗುಂಪುಗಳಲ್ಲಿ ಸಾಲವನ್ನು ಅತ್ಯಂತ ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ತೋರಿಸಿ ಕೊಟ್ಟಿದ್ದಾರೆ. ರಾಜೇಂದ್ರ ಕುಮಾರ್ ಅವರು ನವೋದಯ ಸ್ವಸಾಯ ಗುಂಪಿನ ಸ್ಥಾಪನೆ ಮಾಡುವ ಮುಖಾಂತರ ಬಹಳದೊಡ್ಡ ಸಕ್ತಿಯನ್ನು ಮಹಿಳಾ ಗುಂಪುಗಳಿಗೆ ಕೊಟ್ಟಿದ್ದಾರೆ. ಉಡುಪಿಯಲ್ಲಿ ಈ ರೀತಿ ಸಮಾವೇಶ ಮಾಡುವ ಮೂಲಕ ಮಹಿಳೆಯರನ್ನು ಇನ್ನಷ್ಟು ಸಬಲೀಕರಣಗೊಳಿಸಬೇಕು. ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬೆಳೆಸಬೇಕು ಎನ್ನುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಅಭಿನಂದನೀಯವಾದ್ದು ಎಂದರು.

ಕಳೆದ 10 ವರ್ಷಗಳ ಹಿಂದೆ ಇದ್ದ ಉಡುಪಿ ಈಗ ಇಲ್ಲ. ಉಡುಪಿ ಬಹಳ ದೊಡ್ಡ ಪ್ರಮಾಣದ ಪ್ರಗತಿಯನ್ನು ಕಾಣುತ್ತಿದ್ದೆ ಎಂದ ಅವರು, ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ಅವರು ಶಾಸಕರಾಗಿ ಬಂದ ನಂತರ ಉಡುಪಿ ಮಣಿಪಾಲದ ಚಿತ್ರಣ ಬದಲಾಗಿದೆ. ಅಭಿವೃದ್ಧಿ ಕಾರ್ಯಗಳು ನಡೀತಾ ಇದೆ. ಮುಂದಿನ ದಿಗಳಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಹಣಕಾಸಿನ ವ್ಯವಹಾರ ವಹಿಸಿಕೊಟ್ಟಲ್ಲಿ ಸುಸ್ಥಿರ ನಿರ್ವಹಣೆ ಸಾಧ್ಯ ಎಂದ ಅವರು, ಡಾ| ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್,ಕಳೆದ 2 ದಶಕಗಳಿಂದ ಅಪೂರ್ವ ಸಾಧನೆ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಅವರು 2000ರಲ್ಲಿ ಆರಂಭಿಸಿದ ನವೋದಯ ಸ್ವಸಹಾಯ ಗುಂಪುಗಳು ಮಹಿಳಾ ಸಬಲೀಕರಣದಲ್ಲಿ ದೊಡ್ಡ ಹೆಜ್ಜೆಯನ್ನು ದಾಖಲಿಸಿದೆ. ಕೊರೊನಾದಿಂದ ಸಾವನ್ನಪ್ಪಿರುವ ಸಹಕಾರಿಗಳ ಕುಟುಂಬಕ್ಕೆ ಆರ್ಥಿಕ ನೆರವು, ಯಾವುದೇ ಭದ್ರತೆ ಇಲ್ಲದೆ ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ 25 ಲಕ್ಷ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿಕೆ, ಅಪಘಾತ ಅನಾರೋಗ್ಯ ಇತ್ಯಾದಿ ಸಂಭವಿಸಿದಾಗ ಆರ್ಥಿಕ ನೆರವು ನೀಡಲಾಗುತ್ತಿದ್ದು, ಧರ್ಮ ಜಾತಿಯನ್ನು ಪರಿಗಣಿಸದೇ ಮಹಿಳೆಯರ ಸವಾರ್ಂಗೀಣ ಪ್ರಗತಿಯ ಆಶಯದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಈ ವೇಳೆ ಪ್ರಥಮ ಠೇವಣಿ ಪತ್ರ ವಿತರಿಸಿ, ಭದ್ರತಾ ಕೋಶ ಉದ್ಘಾಟಿಸಿದ ಶಾಸಕ ರಘುಪತಿ ಭಟ್ ಅವರು ಮಾತನಾಡಿ, ಪರಸ್ಪರ ಸಹಕಾರ ಮನೋಭಾವದಿಂದ ಮುನ್ನಡೆಯುವ ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ. ಜಿಲ್ಲೆ ವಿಶೇಷ ಸಾಧನೆ ಮಾಡಿದೆ. ಉಡುಪಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಕೆಂಬ ಆಶಯವನ್ನು ತಾನು ಈ ಹಿಂದೆ ಹೊಂದಿದ್ದರೂ ಪ್ರಸ್ತುತ ಬ್ಯಾಂಕುಗಳು ಬೆಸೆದು (ಮರ್ಜ್)ಕೊಳ್ಳುತ್ತಿರುವ ಈ ದಿನಗಳಲ್ಲಿ ಇದು ಅಗತ್ಯವೇ ಎಂದು ಯೋಚಿಸಬೇಕಾಗಿದೆ ಎಂದರು. ಹಾಗೂ ಮೀನುಗಾರ ಮಹಿಳೆಯರಿಗೆ ಶೂನ್ಯ ಶೇ. ಬಡ್ಡಿದರಲ್ಲಿ ನೀಡುವ ಸಾಲವನ್ನು ಸಹಕಾರಿ ಸಂಘಗಳಿಗೂ ವಿಸ್ತರಿಸಲು ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮತಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೋವಿಡ್ ನಿಂದ ನಿಧನರಾದ ಸಹಕಾರಿ ಸಂಘಗಳ ಸದಸ್ಯರ ಕುಟುಂಬದ 59 ಮಂದಿಗೆ ತಲಾ 1 ಲಕ್ಷ ರೂ.ನಂತೆ ಪರಿಹಾರ ಧನ, ಪೆÇೀಲಿಯೊ ಪೀಡಿತರಿಗೆ ನೆರವು, ಚೈತನ್ಯ ವಿಮಾ ಯೋಜನೆ ನೆರವು ಇತ್ಯಾದಿ ವಿತರಿಸಲಾಯಿತು. ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳ ಜೀರ್ಣೋದ್ಧಾರಕ್ಕಾಗಿ 25 ಲಕ್ಷ ರೂ. ನೆರವನ್ನು ನೀಡಲಾಗಿದ್ದು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಅವರಿಗೆ ಡಾ| ಎಂ. ಎನ್. ರಾಜೇಂದ್ರಕುಮಾರ್ ನೆರವಿನ ಮೊತ್ತವನ್ನು ಹಸ್ತಾಂತರಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಅಶೋಕ ಪೈ ಮತ್ತು ಪುರುಷೋತ್ತಮ ಶೆಟ್ಟಿ ಹಾಗೂ ಎಸ್‍ಡಿಸಿಸಿ ಬ್ಯಾಂಕ್ ಮಣಿಪಾಲ ಶಾಖೆ ಪ್ರಬಂಧಕ ಪ್ರವೀಣಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರಕುಮಾರ್ ಅವರನ್ನು ಸಿಬಂದಿಗಳು ಗೌರವಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಮಣಿಪಾಲ ದಿ ಕೆನರಾ ಲ್ಯಾಂಡ್ ಇನ್ ವೆಸ್ಟ್ಮೆಂಟ್ ನ ವ್ಯವಸ್ಥಾಪಕ ನಿರ್ದೇಶಕ ಟಿ. ಅಶೋಕ ಪೈ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,  ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಹೆರ್ಗ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಕರ್ನಾಟಕ ಅಪೆಕ್ಸ್ ಬ್ಯಾಂಕ್ ಸಿಇಓ ಸಿ. ಎನ್. ದೇವರಾಜ್, ನಬಾರ್ಡ್ ಬ್ಯಾಂಕ್ ಡಿಜಿಎಂ ಸಂಗೀತಾ ಕರ್ತಾ, ಎಸ್.ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಸಿಇಓ ರವೀಂದ್ರ ಬಿ., ಬ್ಯಾಂಕಿನ ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜಾರಾಮ್ ಭಟ್, ಭಾಸ್ಕರ ಎನ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಎಸ್. ರಾಜು ಪೂಜಾರಿ, ಶಶಿಕುಮಾರ್ ರೈ, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಹರಿಶ್ಚಂದ್ರ, ಎಂ. ಮಹೇಶ ಹೆಗ್ಡೆ, ಕೆ. ಜೈರಾಜ್ ಬಿ. ರೈ, ಬಿ. ಅಶೋಕಕುಮಾರ್ ಶೆಟ್ಟಿ, ರಾಜೇಶ ರಾವ್ ಮತ್ತು ಸದಾಶಿವ ಉಳ್ಳಾಲ್ ಹಾಗೂ ಸಹಕಾರ ಸಂಘಗಳ ನಿಬಂಧಕ ಪ್ರವೀಣ ಬಿ. ನಾಯಕ್ ಉಪಸ್ಥಿತರಿದ್ದರು.

ಸಮಾವೇಶಕ್ಕೂ ಮುನ್ನ ಮಣಿಪಾಲ ಟೈಗರ್ ವೃತ್ತದಿಂದ ಎಂಐಟಿ ವರೆಗೆ ಸಹಕಾರಿಗಳು ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯೆಯರ ಮೆರವಣಿಗೆ ನಡೆಯಿತು. ಬ್ಯಾಂಕಿನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ, ಬ್ಯಾಂಕಿನ ನಿರ್ದೇಶಕ ಬಿ.ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!