ಬಟ್ಟೆ ಮಳಿಗೆಯ ಮೇಲ್ವಿಚಾರಕನಿಗೆ ಹಲ್ಲೆ ಪ್ರಕರಣ: ಮೂವರು ಆಟೋ ಚಾಲಕರ ಬಂಧನ

ಕಾರ್ಕಳ, ಮೇ.2: ಜೋಡುರಸ್ತೆಯ ಬಟ್ಟೆ ಮಳಿಗೆಯ ಮೇಲ್ವಿಚಾರಕನ ಮೇಲೆ ಎ. 29ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆಟೋ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕರಾದ ಪದ್ಮನಾಭ ಶೆಟ್ಟಿಗಾರ, ಮನೋಜ, ಫಾಸ್ಕರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾವನ್ನೂ ವಶಕ್ಕೆ ಪಡೆಯಲಾಗಿದೆ.
ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮೇಲ್ವಿಚಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೀಶ್ ನಾಯಕ(47) ಅವರಿಗೆ ಈ ಮೂವರು ಆಟೋ ಚಾಲಕರು ಹಲ್ಲೆ ಮಾಡಿದ್ದರು. 

ಯೋಗೀಶ್ ನಾಯಕ್ ಅವರು ತನ್ನ ಬೈಕ್‌ನಲ್ಲಿ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಿಂದ ಅದೇ ಸಂಸ್ಥೆಗೆ ಸೇರಿದ ರಸ್ತೆಯ ಮತ್ತೊಂದು ಪಾರ್ಶ್ವದಲ್ಲಿ ಇರುವ ಪೂರ್ಣಿಮಾ ಪ್ರೈಮ್ ಮಾಲ್‌ಗೆ ಕೆಲಸದ ನಿಮಿತ್ತ ಹೋಗಿ ಹಿಂತಿರುಗುತ್ತಾ ಸಂದರ್ಭದಲ್ಲಿ ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿತರು ರಿಕ್ಷಾ ಬಾಡಿಗೆಯನ್ನು ತಮಗೆ ನೀಡದೇ ಬೇರೆಯವರಿಗೆ ನೀಡುತ್ತಿದ್ದೀಯಾ? ಎಂದು ಪ್ರಶ್ನಿಸಿ ಹಿಗ್ಗಾಮುಗ್ಗ ಥಳಿಸಿ, ಗುದ್ದಿ ಗಾಯಗೊಳಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಠಾಣಾಧಿಕಾರಿಯವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!