ಖಾಸಗಿ ಬಸ್ಸಿನ ಬ್ರೇಕ್ ವೈಫಲ್ಯ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಉಡುಪಿ ಎ.30(ಉಡುಪಿ ಟೈಮ್ಸ್ ವರದಿ): ಮಂಗಳೂರಿನಿಂದ ಉಡುಪಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ಸಿನ  ಬ್ರೇಕ್ ವೈಫಲ್ಯವಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಮಂಗಳೂರಿನಿಂದ ಉಡುಪಿ ಆಗಮಿಸುತ್ತಿದ್ದ ಖಾಸಗಿ ಬಸ್ ನಲ್ಲಿ ದಾರಿ ಮಧ್ಯೆ ತಾಂತ್ರಿಕ ಸಮಸ್ಯೆ ಕಂಡು ಬಂದಿತ್ತು. ಆದರೂ ಪ್ರಯಾಣಿಕರಿದ್ದ ಕಾರಣ ನಗರದೊಳಗೆ ಬಸ್ಸನ್ನು ಚಾಲಕ ಚಾಲಾಯಿಸಿಕೊಂಡು ಬಂದಿದ್ದರು. ಈ ವೇಳೆ ಸರ್ವಿಸ್ ಬಸ್ ನಿಲ್ದಾಣ ಸಮೀಪಿಸುತ್ತಿದ್ದಂತೆ ಬಸ್ ಇಂಜಿನ್ ಏಕಾಏಕಿ ಬಂದ್ ಆಗಿ, ಬ್ರೇಕ್ ಹಿಡಿಯದೇ ಚಲಿಸಲು ಆರಂಭಿಸಿತ್ತು. ರಸ್ತೆ ಬದಿಯಲ್ಲಿ ಹಲವು ಗೂಡಂಗಡಿಗಳು, ಹಾಗೂ ಪಾರ್ಕಿಂಗ್ ಮಾಡಿದ ವಾಹನಗಳು ನಿಂತಿದ್ದು, ಬಸ್ಸಿನಲ್ಲಿಯೂ ಪ್ರಯಾಣಿಕರಿದ್ದ ಕಾರಣ ಎಚ್ಚೆತ್ತುಕೊಂಡ ಚಾಲಕ ಫುಟ್ ಪಾತ್ ಮೇಲೆ ಬಸ್ ಹತ್ತಿಸಿದ ಪರಿಣಾಮ ಬಸ್ ನಿಂತಿದೆ. ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ಹಾಗೂ ರಸ್ತೆ ಪಕ್ಕದಲ್ಲಿದ್ದ ಪಾದಚಾರಿಗಳಿಗೆ ಯಾವುದೇ ಜೀವಪಾಯವಿಲ್ಲದೆ ಪಾರಾಗಿದ್ದಾರೆ. ಇದೀಗ ಬಸ್ ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!