| ಮಂಗಳೂರು: ಪುರಭವನದಲ್ಲಿ ನಡೆಯುತ್ತಿರುವ “ಸೀನಿಯರ್ ನ್ಯಾಷನಲ್ ಪವರ್‌ಫ್ಟಿಂಗ್ ಚಾಂಪಿಯನ್ ಶಿಪ್ ನ 2ನೇ ದಿನ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಅಂತಾರಾಜ್ಯ ಹಾಗು ಬೆಂಚ್ಪ್ರೆಸ್ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದರು. ಮಂಗಳೂರಿನ ಬಾಲಾಂಜನೇಯ ವ್ಯಾಯಾಮಶಾಲೆಯ ಸದಸ್ಯರಾದ ಇವರು 83 ಕೆಜಿ ವಿಭಾಗದಲ್ಲಿ ಒಟ್ಟು 795 ಕೆಜಿ ಭಾರವನ್ನು ಎತ್ತಿದರು.
ಸ್ಕ್ವಾಟ್ 315 ಕೆ.ಜಿ.ಬೆಂಚ್ಪ್ರೆಸ್ 220 ಕೆ.ಜಿಡೆಡ್ಲಿಫ್ಟ್ 260 ಕೆ.ಜಿ ಬಾಲಾಂಜನೇಯ ವ್ಯಾಯಾಮಶಾಲೆ ಬಾಳ ಅನಂತ್ ಭಟ್ ಅವರು 93 ಕೆಜಿ ವಿಭಾಗದಲ್ಲಿಕಂಚಿನ ಪದಕವನ್ನು ಪಡೆದರು. 83 ಕೆಜಿ ವಿಭಾಗದಲ್ಲಿ ಭಾರತಿಯ ರೈಲ್ವೇ ತಂದ ಷಣ್ಮುಗಂ ಚಿನ್ನದ ಪದಕ ಪಡೆದರು. 93 ಕೆಜಿ ವಿಭಾಗದಲ್ಲಿ ಭಾರತದ ರೈಲ್ವೆ ತಂಡದಲ್ಲಿ ದಿಲ್ಶಾದ್ ಅವರು ಚಿನ್ನದ ಪದಕ ಪಡೆದಿದ್ದಾರೆ. ನಗರದ ಬಾಲಾಂಜನೇಯ ವ್ಯಾಯಾಮ ಶಾಲೆಯ 75 ನೇ ವಾರ್ಷಿಕೋತ್ಸವದ ವರ್ಷಾಚರಣೆಯ ಸಲುವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. | |