ಉಡುಪಿ ಲಯನ್ಸ್ ಕ್ಲಬ್- 2ನೇ ಲಯನ್ಸ್ ಉಪಜಿಲ್ಲಾ ಗವರ್ನರ್ ಸ್ಥಾನಕ್ಕೆ ಲ.ಮಹಮ್ಮದ್ ಹನೀಫ್ ಸ್ಪರ್ಧೆ
ಉಡುಪಿ ಎ.29(ಉಡುಪಿ ಟೈಮ್ಸ್ ವರದಿ):ಪ್ರತಿಷ್ಠಿತ ಲಯನ್ಸ್ ಕ್ಲಬ್ ಉಡುಪಿ" ಇದರ ಜಿಲ್ಲಾ ಸಮ್ಮೇಳನವು ಎ.30 ಮತ್ತು ಮೇ 1ರಂದು ನಡೆಯಲಿದ್ದು,ಈ ಸಮ್ಮೇಳನದಲ್ಲಿ 2022-23ನೇ ಸಾಲಿನ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಬಾರಿಯ ಉಡುಪಿಯ ಲಯನ್ಸ್ ಕ್ಲಬ್ ಇದರ 2022-23 ನೇ ಸಾಲಿನ 2ನೇ ಲಯನ್ಸ್ ಉಪಜಿಲ್ಲಾ ಗವರ್ನರ್ ಸ್ಥಾನಕ್ಕೆ ಉಡುಪಿ ಮಿಡ್ ಟೌನ್ ಲಯನ್ಸ್ ಕ್ಲಬ್ಬಿನ ಸದಸ್ಯ ಲಯನ್ ಮಹಮ್ಮದ್ ಹನೀಫ್ ಪಿ.ಎಂ.ಜೆ.ಎಫ್ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಲಯನ್ ಮಹಮ್ಮದ್ ಹನೀಫ್ ಪಿ.ಎಂ.ಜೆ.ಎಫ್ ಅವರು, ಸರಳ ಸಜ್ಜನಿಕೆಯ ಅತೀವ ಸೇವಾ ತುಡಿತವುಳ್ಳ ವ್ಯಕ್ತಿಯಾಗಿದ್ದಾರೆ. ಲ. ಮಹ್ಮದ್ ಹನೀಫ್‍ರವರು ನೇರ ನಡೆ-ನುಡಿ, ಮೃದು ಸ್ವಭಾವ, ಸೇವಾಕಾಂಕ್ಷಿ ಸ್ವಭಾವದ ವ್ಯಕ್ತಿಯಾಗಿದ್ದಾರೆ.
ಉಡುಪಿ ವಿ.ಕೆ.ಬಿಲ್ಡರ್ಸ್ ನ ಮುಖಾಂತರ ವಾಣಿಜ್ಯ ವಲಯ ಮತ್ತು ಲಯನ್ಸ್ ಸೇವಾ ಸಂಸ್ಥೆಯ ಮೂಲಕ ಸಾಮಾಜಿಕ ನೆಲೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ. ಫಲಾಪೇಕ್ಷೆಯಿಲ್ಲದೆ ಸೇವೆಯನ್ನು ಸಲ್ಲಿಸುತ್ತಿರುವ ಲ.ಮಹ್ಮದ್ ಹನೀಫ್ ರವರು ಪ್ರಚಾರ ಬಯಸದೆ ನಿರಂತರ ಪರಿಶ್ರಮದಿಂದ ತನ್ನ ನಾಯಕತ್ವದ ಮೂಲಕ ಯಶಸ್ವೀ ವಾಣಿಜ್ಯ ಉದ್ದಿಮೆಯನ್ನು ಬೆಳೆಸಿ, ಹಲವಾರು ಬಡ ಕುಟುಂಬಗಳಿಗೆ ಆಶ್ರಯದಾತರಾಗಿದ್ದಾರೆ. ಹಲವಾರು ಬಡ ಬಗ್ಗರಿಗೆ, ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಲಯನ್ಸ್ ಸೇವಾ ಕಾರ್ಯಕ್ರಮಕ್ಕೆ ಕಳೆದ 13 ವರ್ಷಗಳಿಂದ ಧನ ಸಹಾಯ ನೀಡುತ್ತಾ ಬಂದಿರುವ ಲಯನ್ ಮಹ್ಮದ್ ಹನೀಫ್ ಅವರು ಎಂದೂ ಯಾರಲ್ಲೂ ಏನನ್ನು ಬಯಸದೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದಲ್ಲಿ ಮರು ಯೋಚಿಸದೇ ಕಾರ್ಯಪ್ರವೃತ್ತರಾಗಿದ್ದಾರೆ.
ಇವರು ಕ್ಲಬ್ಬಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ವಲಯಾಧ್ಯಕ್ಷರಾಗಿ, ಪ್ರಾಂತೀಯ ಅಧ್ಯಕ್ಷರಾಗಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿ, ಎಲ್.ಸಿ.ಎಫ್.ಕೋ-ಆರ್ಡಿನೇಟರ್ ಆಗಿ, ಜಿಲ್ಲಾ ಲೀಯೋ ಕಾರ್ಡಿನೇಟರ್ ಆಗಿ ಸೇವೆ ಸಲ್ಲಿಸಿರುವ ಅವರು, ತನ್ನ ಸುದೀರ್ಘ ಜೀವನಾನುಭವದ ಮತ್ತು ಸ್ಪಷ್ಟ ಚಿಂತನೆಗಳ ಮೂಲಕ ಹಲವಾರು ಲಯನ್ಸ್ ಸದಸ್ಯರುಗಳಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಉತ್ತಮ ಸಂಘಟಕ, ವಾಗ್ಮಿ, ಚಿಂತಕ, ಇವರಿಗೆ ಅತ್ಯುತ್ತಮ ಕ್ಲಬ್ ಅಧ್ಯಕ್ಷ, ಅತ್ಯುತ್ತಮ ಕಾರ್ಯದರ್ಶಿ, ಅಂತರಾಷ್ಟ್ರೀಯ ಅಧ್ಯಕ್ಷರ ಸುಪ್ರೀಮ್ ಎಕ್ಸಲೆನ್ಸ್ ಅವಾರ್ಡ್, ಕರಾವಳಿ ಸಿಂಹ-2013, ಮಲ್ಟಿಪಲ್‍ನಲ್ಲಿ ಅತಿ ಹೆಚ್ಚು ಎಂ.ಜೆ.ಎಫ್. ಮಾಡಿದ ಬಾಬ್ತು ಅಂತರಾಷ್ಟ್ರೀಯ ಕಂಚಿನ ಪ್ರಶಸ್ತಿ, ಅಂತರಾಷ್ಟ್ರೀಯ ಅಧ್ಯಕ್ಷರ ಪದಕ, ಲಯನ್ ಆಫ್ ದಿ ಇಯರ್, ಅತ್ಯುತ್ತಮ ವಲಯ ಮತ್ತು ಪ್ರಾಂತೀಯ ಅಧ್ಯಕ್ಷರ ಗೌರವ ಲಭಿಸಿದೆ.