ಉಡುಪಿ: ಪೊಲೀಸ್ ಪೇದೆ ಗುಂಡಿಕ್ಕಿ ಆತ್ಮಹತ್ಯೆ
ಉಡುಪಿ ಎ.29 (ಉಡುಪಿ ಟೈಮ್ಸ್ ವರದಿ): ಪೊಲೀಸ್ ಸಿಬ್ಬಂದಿಯೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದಿ ಉಡುಪಿಯ ಶಾಲೆಯಲ್ಲಿ ನಡೆದಿದೆ.
ಶಸಸ್ತ್ರ ಮೀಸಲು ಪಡೆಯ ಸಿಬ್ಬಂದಿ ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡವರು. ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿಯ ಮೌಲ್ಯ ಮಾಪನ ಕೇಂದ್ರವಾಗಿದ್ದ ಆದಿ ಉಡುಪಿ ಶಾಲೆಯಲ್ಲಿ ಭದ್ರತೆಗಾಗಿ ನಿಯೋಜನೆ ಗೊಂಡಿದ್ದ ವೇಳೆ ಇಂದು ಬೆಳಿಗ್ಗೆ ಅವರು ತಮ್ಮದೇ ಸರ್ವೀಸ್ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಒಂದು ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ಸಿಬ್ಬಂದಿಗಳ ನಡುವೆ ನಡೆದ ಹೊಡೆದಾಟದಲ್ಲಿ ರಾಜೇಶ್ ಕುಂದರ್ ಅವರು ಅಮಾನತುಗೊಂಡಿದ್ದು ನಿನ್ನೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‍ಪಿ ಹಾಗೂ ಉಡುಪಿ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೃತ್ತನಿರೀಕ್ಷಕ ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ
Why the Udupi becoming like this very good devotional land.
God only knows.
ಬೇಸಿಗೆ ರಜೆ ಯಲ್ಲಿ ಮಕ್ಕಳಿಗೆ ರಜೆ ಇರುತ್ತೆ… ಆದರೆ ಅವರ ಜೊತೆ ಸಮಯ ಕಳೆಯಲು ಪೊಲೀಸ್ ಅಪ್ಪನಿಗೆ / ಅಮ್ಮನಿಗೆ ಸಮಯ ಇಲ್ಲಾ… ಇದೊಂದು ಥರ ಮಾನಸಿಕ ಒತ್ತಡ…