ಕೆಳಪರ್ಕಳದ ಸುರಂಗದ ಬಳಿಯ ಕಾಮಗಾರಿ ವೀಕ್ಷಣೆ
ಮಣಿಪಾಲ: ಪರ್ಕಳದ ಕೆಳಪರ್ಕಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ(169 ಎ.) ಸೇತುವೆಯ ಕಾಮಗಾರಿ ನಡೆಯುವ ಸ್ಥಳಕ್ಕೆ ಉಡುಪಿಯ ಜಿಲ್ಲಾಧಿಕಾರಿಗಳಾದ ಕೂರ್ಮಾರಾವ್ ಸುರಂಗದ ಬಳಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.
ಮುಂದೆ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಹೆದ್ದಾರಿಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಉಡುಪಿ ನಗರಸಭೆಯ ಅಧಿಕಾರಿಗಳು ಕೂಡ ಜೊತೆಗಿದ್ದಿದ್ದರು ಕೆಳಪರ್ಕಳದಲ್ಲಿ ಇತ್ತೀಚೆಗೆ ಕಾಮಗಾರಿ ನಡೆಯುತ್ತಿರುವಾಗ ಪ್ರದೇಶದಲ್ಲಿರುವ (ಪೆರ್ಮರಿ ಖಂಡ )ಗದ್ದೆಯಲ್ಲಿರುವ ಸುರಂಗದಂತೆ ಕಂಡ ಪ್ರದೇಶಕ್ಕೂ ಭೇಟಿನೀಡಿ ತಜ್ಞ ಇಂಜಿನಿಯರ ಜೊತೆ ಮಾತುಕತೆ ನಡೆಸಿ ವೀಕ್ಷೀಸಿದರು. ಈ ಸಂದರ್ಭದಲ್ಲಿ ಹೆದ್ದಾರಿಇಲಾಖೆಯ ಇಂಜಿನಿಯರ್, ನಗರಸಭೆಯ ಅಧಿಕಾರಿಗಳು ಕಾಮಗಾರಿ ನಡೆಸುತ್ತಿರುವ ಸಿಬಂದಿಗಳು ಜೊತೆಗಿದ್ದರು. ನಂತರ ಹಿರಿಯಡಕದಲ್ಲಿರುವ ಕುಡಿಯುವ ನೀರಿನ ಜಲಾಯನ ಪ್ರದೇಶಕ್ಕೆ ಜಿಲ್ಲಾಧಿಕಾರಿಯವರು ಭೇಟಿ ನೀಡುತ್ತಾರೆ ತಿಳಿದುಬಂದಿದೆ.