ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಕಡೆಕಾರು ಗ್ರಾಮ ಪಂಚಾಯತ್ ಶೇ.100 ಸಾಧನೆ
ಉಡುಪಿ ಎ.28 (ಉಡುಪಿ ಟೈಮ್ಸ್ ವರದಿ): 2021-22ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಕಡೆಕಾರು ಗ್ರಾಮ ಪಂಚಾಯತ್ ಶೇ 100 ಸಾಧನೆ ಮಾಡಿದೆ. ಇದೀಗ 100 ಶೇ ದಷ್ಟು ಆಸ್ತಿ ತೆರಿಗೆ ಸಂಗ್ರಹಕ್ಕೆ ಶ್ರಮಿಸಿದ ಕಡೆಕಾರು ಗ್ರಾಮ ಪಂಚಾಯತ್ ನ ಬಿಲ್ ಕಲೆಕ್ಟರ್ ಆದ ಶಶಿಧರ್ ಅವರನ್ನು ಪಂಚಾಯತ್, ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದಿಂದ ಸಮ್ಮಾನಿಸಿ ಗೌರವಿಸಲಾಯಿತು.
ಇನ್ನು ಉಡುಪಿ ತಾಲೂಕಿನ ಕಡೆಕಾರು ಗ್ರಾಮ ಪಂಚಾಯತ್ 2021-22ನೇ ಸಾಲಿನ ಆಸ್ತಿತೆರಿಗೆ ಸಂಗ್ರಹಣೆಯಲ್ಲಿ, ಮಾರ್ಚ್ 31, 2022ರ ಅಂತ್ಯಕ್ಕೆ ಶೇ 100 ಸಾಧನೆ ಮಾಡಿದೆ. 2021-22 ನೇ ಸಾಲಿನ ಆಸ್ತಿ ತೆರಿಗೆ ಒಟ್ಟು ಬೇಡಿಕೆ ರೂ 42,05,604 ಆಗಿದ್ದು, ಅಷ್ಟೇ ಮೊತ್ತದ ತೆರಿಗೆ ಸಂಗ್ರಹ ಆಗಿದೆ. ಇಷ್ಟು ಮೊತ್ತದ ಅಂಕಿ ಅಂಶಗಳನ್ನು ಮಾರ್ಚ್ 31, 2022 ರೊಳಗೆ ಪಂಚತಂತ್ರ ತಂತ್ರಾಂಶಕ್ಕೆ ಆರೋಹಿಸಲಾಗಿದೆ ಎಂದು ತಿಳಿದು ಬಂದಿದೆ.