ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ಡಾ.ತನ್ಮಯ ಗೋಸ್ವಾಮಿ ಅವರಿಗೆ ಸನ್ಮಾನ

ಉಡುಪಿ ಎ.28 (ಉಡುಪಿ ಟೈಮ್ಸ್ ವರದಿ): ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ದುಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ನಿನ್ನೆ ಭಾರತ ಸರಕಾರದ ಆಯುಷ್ ಸಚಿವಾಲಯದ ಸಿಸಿಐಎಂ ನ ಸದಸ್ಯ ಡಾ.ತನ್ಮಯ ಗೋಸ್ವಾಮಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ತನ್ಮಯ ಗೋಸ್ವಾಮಿ ಅವರು, ಸರಿಯಾದ ಸಮಯಕ್ಕೆ ಊಟ, ಕೆಲಸ ಮತ್ತು ಪ್ರತಿದಿನ ವ್ಯಾಯಾಮ ಮಾಡುವವರಿಗೆ 90 ಶೇ.ದಷ್ಟು ಕಾಯಿಲೆ ಬರುವುದನ್ನು ತಡೆಯ ಬಹುದು ಎಂದು ಆರೋಗ್ಯಯುತ ಜೀವನ ಶೈಲಿಯ ಬಗ್ಗೆ ಸಲಹೆ ನೀಡಿದರು. ವೈದ್ಯಕೀಯ ಚಿಕಿತ್ಸೆಗಾಗಿ ಎರಡು ಕುಟುಂಬಗಳಿಗೆ ಸಹಾಯ ಧನ ವಿತರಿಸಲಾಯಿತು.

ಈ ಸಂದರ್ಭ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಯಾನ ವಿಠಲ್ ಪೈ, ಮಾಜಿ ಗವರ್ನರ್ ವಿ..ಜಿ ಶೆಟ್ಟಿ, ಕಾರ್ಯದರ್ಶಿ ವಿಷ್ಣುದಾಸ್ ಪಾಟೀಲ್, ಕೋಶಾಧಿಕಾರಿ ಶ್ರೀಧರ ಭಟ್, ಮಾಜಿ ಗವರ್ನರ್ ರಾಜೀವ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ದುಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಈಗಗಲೇ ಇಂಜಿನಿಯರ್, ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!