ಉಡುಪಿ: ಹವಾಮಾನ ವೈಪರಿತ್ಯ ವೆಬ್ಸೈಟ್ನಲ್ಲಿ
ಉಡುಪಿ, ಏ.27: ಪೂರ್ವ ಮಾನ್ಸೂನ್ ಮಳೆಯು ಈಗಾಗಲೇ ಪ್ರಾರಂಭವಾಗಿದ್ದು, ಅರಬ್ಬಿ ಸಮುದ್ರ ಹಾಗೂ
ಬಂಗಾಳಕೊಲ್ಲಿಗಳಲ್ಲಿ ಈ ಅವಧಿಯಲ್ಲಿ ಚಂಡಮಾರುತಗಳು ಬೀಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಅತಿಯಾದ ಮಳೆ ಹಾಗೂ ಜೋರಾದ ಗಾಳಿ ಭೂಮಿಯ ಕಡೆಗೆ ಬೀಸುವ ಸಾಧ್ಯತೆಗಳಿವೆ. ಈ ಬಗ್ಗೆ ಪ್ರತಿದಿನದ ಮುನ್ಸೂಚನೆಗಳನ್ನು ವೆಬ್ಸೈಟ್ mausam.imd.gov.in/bengaluru ನಲ್ಲಿ ಮಾಹಿತಿ ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.